ಈ ಫೋಟೋದೊಳಗಿರುವ ಅಲ್ಲಾದ್ದೀನ್​ ದೀಪವನ್ನು ಪತ್ತೆ ಮಾಡಲು ಸಾಧ್ಯವೇ..? ಇಲ್ಲಿದೆ ಸವಾಲು…!

ಆಪ್ಟಿಕಲ್​ ಇಲ್ಯೂಶನ್​ ಅಥವಾ ದೃಷ್ಟಿ ಭ್ರಮೆ ಚಿತ್ರಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲದೇ ಮೆದುಳಿಗೂ ಕೆಲಸ ಕೊಡುವಂತಹ ಕಾರ್ಯವನ್ನು ಮಾಡುತ್ತೆ. ನೀವು ಚಿತ್ರವನ್ನು ಯಾವ ರೀತಿಯಲ್ಲಿ ನೋಡುತ್ತೀರಿ ಅನ್ನೋದನ್ನ ಮತ್ತೊಮ್ಮೆ ಯೋಚನೆ ಮಾಡುವಂತೆ ಮಾಡುತ್ತವೆ ಈ ದೃಷ್ಟಿಭ್ರಮೆಯ ಚಿತ್ರಗಳು.

ಮಾನವನ ಮೆದುಳು ವಿಭಿನ್ನವಾಗಿ ಅರ್ಥೈಸುವ ಕೌಶಲ್ಯವನ್ನು ಹೊಂದಿದೆ ಎಂಬುದನ್ನು ಈ ರೀತಿಯ ಫೋಟೋಗಳು ತೋರಿಸಿಕೊಡುತ್ತವೆ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಇಲ್ಲಿರುವ ಫೋಟೋದಲ್ಲಿ ನಿಮಗೆ ಅಲ್ಲಾದ್ದೀನ್​ ದೀಪ ಕಾಣುತ್ತಿದ್ದೆಯೇ..? ಆದರೆ ಈ ಫೋಟೋದಲ್ಲಿ ಕಾಣುತ್ತಿರುವ ಬೇರೆ ಬೇರೆ ವಸ್ತುಗಳ ಮಧ್ಯೆ ಅಲ್ಲಾದ್ದೀನ್​ ದೀಪ ಅಡಗಿದೆ ಎಂದರೆ ನೀವು ನಂಬಲೇಬೇಕು..!ಕೇವಲ 2 ಪ್ರತಿಶತ ಜನರಿಗೆ ಮಾತ್ರ ಅಲ್ಲಾದ್ದೀನ್​ ದೀಪ ಪತ್ತೆ ಮಾಡಲು ಸಾಧ್ಯವಂತೆ.

ನಿಮಗೂ ಕೂಡ ಈ ಫೋಟೋದಿಂದ ಅಲ್ಲಾದ್ದೀನ್​ ದೀಪ ಹುಡುಕೋದು ಕಷ್ಟವಾಗ್ತಿದ್ಯೇ..? ಹಾಗಾದಲ್ಲಿ ನಿಮಗೆ ಸಹಾಯ ಮಾಡೋಕೆ ನಾವಿದ್ದೇವೆ. ಈ ಫೋಟೋದಲ್ಲಿ ಎಡಭಾಗದಲ್ಲಿ ಕೆಳಗಡೆಯಲ್ಲಿ ಸೂಕ್ಷ್ಮವಾಗಿ ಗಮನಿಸಿ. ಅಲ್ಲಿ ನಿಮಗೆ ಬಂಗಾರ ಬಣ್ಣದ ಅಲ್ಲಾದ್ದೀನ್ ದೀಪ ಕಾಣಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read