BIG NEWS: ರಾಹುಲ್ ಪರ ನಿಲ್ಲಲು ವಿಪಕ್ಷಗಳ ಎಲ್ಲ ಸಂಸದರ ರಾಜೀನಾಮೆಗೆ RJD ಶಾಸಕನ ಕರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಪ್ರತಿಭಟಿಸಿ ವಿರೋಧ ಪಕ್ಷದ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕೆಂದು ಆರ್‌.ಜೆ.ಡಿ. ಶಾಸಕ ಭಾಯಿ ವೀರೇಂದ್ರ ಕರೆ ನೀಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬೆದರಿಕೆ ವಿರುದ್ಧದ ಹೋರಾಟದಲ್ಲಿ . ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಷ್ಟ್ರವನ್ನು ಮುನ್ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.

ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ಲಖನ್ ಸಿಂಗ್ ಯಾದವ್ ಅವರ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿತೀಶ್ ಕುಮಾರ್ ಸಹ ಉಪಸ್ಥಿತರಿದ್ದ ಸಮಾರಂಭದಲ್ಲಿ ಪಕ್ಷದ ಮುಖ್ಯ ವಕ್ತಾರರೂ ಆಗಿರುವ ಶಾಸಕ ಭಾಯಿ ವಿರೇಂದ್ರ ಈ ಹೇಳಿಕೆಯನ್ನು ನೀಡಿದ್ದಾರೆ.

ನನ್ನ ದೃಷ್ಟಿಯಲ್ಲಿ ರಾಹುಲ್ ಗಾಂಧಿಗೆ ಏನಾಗಿದೆಯೋ ಅದು ಅಂತ್ಯವಲ್ಲ. ಇದು ಕೇವಲ ಆರಂಭವಾಗಿರಬಹುದು. ನನ್ನ ನಾಯಕ (ಉಪ ಮುಖ್ಯಮಂತ್ರಿ) ತೇಜಸ್ವಿ ಯಾದವ್ ಈಗಾಗಲೇ ಕಿರುಕುಳ ಎದುರಿಸುತ್ತಿದ್ದಾರೆ. ನಾನು ಮುಂದಿನ ಸಾಲಿನಲ್ಲಿರಬಹುದು. ಆದ್ದರಿಂದ, ಪ್ರಜಾಪ್ರಭುತ್ವಕ್ಕೆ ಬೆದರಿಕೆಯ ವಿರುದ್ಧ ಇಡೀ ಪ್ರತಿಪಕ್ಷಗಳು ಹೋರಾಟಕ್ಕೆ ಧುಮುಕಲು ಇದು ಸುಸಮಯವಾಗಿದೆ ಎಂದು ಅವರು ಹೇಳಿದರು.

“ಎಲ್ಲ ವಿರೋಧ ಪಕ್ಷದ ಸಂಸದರು ರಾಜೀನಾಮೆ ನೀಡುವ ಮೂಲಕ ಆರಂಭವನ್ನು ಮಾಡಬಹುದು ಮತ್ತು ಅದರ ನಂತರ, ನಮ್ಮ ಮುಖ್ಯಮಂತ್ರಿಗಳು ಹೋರಾಟದಲ್ಲಿ ರಾಷ್ಟ್ರವನ್ನು ಮುನ್ನಡೆಸಲಿ ಎಂದು ಭಾಯಿ ವೀರೇಂದ್ರ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read