BREAKING: ಅತ್ಯುತ್ತಮ ಚಿತ್ರ, ನಟ ಸೇರಿ 7 ಆಸ್ಕರ್ ಪ್ರಶಸ್ತಿ ಬಾಚಿಕೊಂಡ ‘ಓಪನ್ ಹೈಮರ್’

ಭಾನುವಾರ ಲಾಸ್ ಏಂಜಲೀಸ್‌ ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಅಕಾಡೆಮಿ ಪ್ರಶಸ್ತಿಗಳ 96 ನೇ ಆವೃತ್ತಿಯಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ “ಓಪೆನ್‌ಹೈಮರ್” ನಲ್ಲಿನ ಅಭಿನಯಕ್ಕಾಗಿ ಸಿಲಿಯನ್ ಮರ್ಫಿ “ಅತ್ಯುತ್ತಮ ನಟ” ವಿಭಾಗದಲ್ಲಿ ಆಸ್ಕರ್ ಪಡೆದರು.

ಅತ್ಯುತ್ತಮ ಚಿತ್ರ, ನಿರ್ದೇಶಕ ಮತ್ತು ನಟ ಸೇರಿ 7 ವಿಭಾಗದಲ್ಲಿ ‘ಒಪೆನ್‌ಹೈಮರ್’ 7 ಪ್ರಶಸ್ತಿ ಗೆದ್ದಿದೆ. “ದಿ ಹೋಲ್ಡೋವರ್ಸ್” ಗೆ ನಾಮನಿರ್ದೇಶನಗೊಂಡ ಪಾಲ್ ಗಿಯಾಮಟ್ಟಿಯವರ ಸ್ಪರ್ಧೆಯನ್ನು ಮರ್ಫಿ ಸೋಲಿಸಿದರು, ಮರ್ಫಿ ಅವರು “ಒಪ್ಪೆನ್‌ಹೈಮರ್” ನಲ್ಲಿನ ಅಭಿನಯಕ್ಕಾಗಿ “ಅತ್ಯುತ್ತಮ ನಟ” ವಿಭಾಗದಲ್ಲಿ BAFTA ಗೆದ್ದಿದ್ದರು ಮತ್ತು ಜನವರಿಯಲ್ಲಿ “ಅತ್ಯುತ್ತಮ ಪುರುಷ ನಟ – ಚಲನಚಿತ್ರ – ನಾಟಕ” ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಪೋಷಕ ನಟ ಎಂಬ ಪ್ರಮುಖ ಗೆಲುವುಗಳೊಂದಿಗೆ ‘ಓಪನ್‌ಹೈಮರ್’ ಏಳು ಆಸ್ಕರ್‌ಗಳನ್ನು ಪಡೆದಿದೆ. ‘ಪೂರ್ ಥಿಂಗ್ಸ್’ ನಾಲ್ಕು ಪ್ರಶಸ್ತಿ ಗಳಿಸಿತು ಮತ್ತು ‘ದಿ ಝೋನ್ ಆಫ್ ಇಂಟರೆಸ್ಟ್’ ಎರಡು ಅವಾರ್ಡ್ ಪಡೆದುಕೊಂಡಿತು.

https://twitter.com/OppenheimerFilm/status/1767013198946083039

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read