ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಉಭಯ ದೇಶಗಳ ಸೇನೆಯಿಂದ ದಾಳಿ-ಪ್ರತಿದಾಳಿ ಆರಂಭವಾಗಿದ್ದು, ಪಾಕಿಸ್ತಾನಕ್ಕೆ ಭಾರತ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡುತ್ತಿದೆ.
ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಸೇನೆ ಕ್ಷಿಪಣಿ ದಾಳಿಗೆ ಯತ್ನಿಸಿದ್ದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಭಾರತೀಯ ಸೇನೆ ಪಾಕಿಸ್ತಾನದ 14 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಲಾಹೋರ್, ರಾವಲ್ಪಿಂಡಿ, ಕರಾಚಿ ಸೇರಿದಂತೆ 14 ನಗರಗಳ ಮೇಲೆ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ಸೇನಾನೆಲೆ, ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಂಡಿದೆ.
ರಾವಲ್ಪಿಂಡಿಯಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಮೇಲೆ ಭಾರತೀಯ ಸೇನೆ ಡ್ರೋನ್ ದಾಳಿ ನಡೆಸಿದೆ. ಸ್ಟೇಡಿಂ ಛಿದ್ರಛಿದ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ರಾವಲ್ಪಿಂಡಿ ತೊರೆಯುವಂತೆ ಕ್ರಿಕೆಟ್ ಆಟಗಾರರಿಗೆ ಪಿಸಿಬಿ ಸೂಚನೆ ನೀಡಿದೆ.
ರಾವಲ್ಪಿಂಡಿ ಸ್ಟೇಡಿಯಂ ನಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ನಡೆಯುತ್ತಿತ್ತು. ಪಾಕಿಸ್ತಾನ ಹಾಗೂ ವಿದೇಶಿ ಆಟಗಾರರು ಪಂದ್ಯಾವಳಿ ಆಡುತ್ತಿದ್ದರು. ಈ ವೇಳೆ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋನ್ ದಾಳಿ ನಡೆದಿದ್ದು, ಸ್ಟೇಡಿಯಂ ಧ್ವಂಸಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಟಗಾರರು ರಾವಲ್ಪಿಂಡಿ ತೊರೆಯುವಂತೆ ಸೂಚನೆ ನೀಡಲಾಗಿದೆ.