ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗುಡ್ ನ್ಯೂಸ್: ಸಬ್ಸಿಡಿ ದರದಲ್ಲಿ ಕೆಜಿಗೆ 25 ರೂ.ಗೆ ಮಾರಾಟ

ನವದೆಹಲಿ: ಸಹಕಾರಿ ಎನ್‌ಸಿಸಿಎಫ್ ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿಗೆ 25 ರೂ. ರ ಸಬ್ಸಿಡಿ ದರದಲ್ಲಿ ಸರ್ಕಾರಿ ಬಫರ್ ಸ್ಟಾಕ್‌ನಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಲಿದೆ.

ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ(ಎನ್‌ಸಿಸಿಎಫ್) ಈಗಾಗಲೇ ಕೇಂದ್ರ ಸರ್ಕಾರದ ಪರವಾಗಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ ಮತ್ತು ಇದೀಗ ಚಿಲ್ಲರೆ ಬಫರ್ ಈರುಳ್ಳಿಯನ್ನು ಕಡ್ಡಾಯಗೊಳಿಸಲಾಗಿದೆ.

2023-24ನೇ ಹಣಕಾಸು ವರ್ಷಕ್ಕೆ 3 ಲಕ್ಷ ಟನ್ ಈರುಳ್ಳಿಯ ಬಫರ್ ಸ್ಟಾಕ್ ಅನ್ನು ಸರ್ಕಾರ ರಚಿಸಿದೆ. ಈ ವರ್ಷ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿಯನ್ನು ಬಫರ್‌ಗಾಗಿ ಸಂಗ್ರಹಿಸಲು ನಿರ್ಧರಿಸಿದೆ.

ಮೊದಲಿಗೆ, ನಾವು ದೆಹಲಿಯಲ್ಲಿ ಬಫರ್ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸುತ್ತೇವೆ. ನಾವು ನಮ್ಮ ಮೊಬೈಲ್ ವ್ಯಾನ್‌ಗಳು ಮತ್ತು ಎರಡು ಚಿಲ್ಲರೆ ಮಳಿಗೆಗಳ ಮೂಲಕ ಪ್ರತಿ ಕೆಜಿಗೆ 25 ರೂ. ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತೇವೆ ಎಂದು ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನೀಸ್ ಜೋಸೆಫ್ ಚಂದ್ರ ತಿಳಿಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read