BIG NEWS: ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿ ಬಗ್ಗೆ ದೇಶಾದ್ಯಂತ ಜನರಿಂದ ಸಲಹೆ ಪಡೆಯಲು ವೆಬ್ಸೈಟ್ ಆರಂಭ

ನವದೆಹಲಿ: ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಧೇಯಕದ ಕುರಿತಾಗಿ ದೇಶಾದ್ಯಂತ ಜನರಿಂದ ಸಲಹೆಗಳನ್ನು ಆಹ್ವಾನಿಸಲು ವಿಧೇಯಕ ಪರಿಶೀಲನೆಗಾಗಿ ರಚಿಸಿರುವ ಜಂಟಿ ಸಂಸದೀಯ ಸಮಿತಿ ವತಿಯಿಂದ ಶೀಘ್ರದಲ್ಲಿಯೇ ವೆಬ್ಸೈಟ್ ಆರಂಭಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಪಿ.ಪಿ. ಚೌಧರಿ ತಿಳಿಸಿದ್ದಾರೆ.

ಸಮಿತಿಯು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ವಿಷಯದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡ ಬಯಸಿದೆ ಎಂದು ಹೇಳಿದ್ದಾರೆ.

ಜಂಟಿ ಸಂಸದೀಯ ಸಮಿತಿಯು ರಾಜ್ಯಸಭೆ ಸದಸ್ಯ ರಂಜನ್ ಗೊಗೊಯ್ ಮತ್ತು ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರ ಅಭಿಪ್ರಾಯಗಳನ್ನು ಕೂಡ ಕೇಳಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ದೇಶಾದ್ಯಂತ ಜ್ಞಾಪನಾ ಪತ್ರಗಳನ್ನು ಆಹ್ವಾನಿಸುವ ಜಾಹೀರಾತನ್ನು ಸಮಿತಿ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read