World Stroke Day 2023: ವಿಶ್ವ ಪಾರ್ಶ್ವವಾಯು ದಿನದಂದು ಬಹಿರಂಗವಾಗಿದೆ ಶಾಕಿಂಗ್‌ ಸತ್ಯ; ಪ್ರತಿ 4 ನಿಮಿಷಕ್ಕೊಬ್ಬರನ್ನು ಬಲಿ ಪಡೆಯುತ್ತಿದೆ ಈ ಕಾಯಿಲೆ….!

ಪಾರ್ಶ್ವವಾಯು ಎಲ್ಲಾ ವಯಸ್ಸಿನವರನ್ನೂ ಕಾಡುತ್ತಿರುವ ಅಪಾಯಕಾರಿ ಕಾಯಿಲೆಗಳಲ್ಲೊಂದು. ಆಘಾತಕಾರಿ ಸಂಗತಿಯೆಂದರೆ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ರೋಗಿಯು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.

ಮದ್ಯಪಾನ, ಅಸಮರ್ಪಕ ಆಹಾರ ಸೇವನೆ, ರಕ್ತದೊತ್ತಡ, ಮಧುಮೇಹ ಮುಂತಾದ ಕಾರಣಗಳಿಂದ ಜನರು ಚಿಕ್ಕ ವಯಸ್ಸಿನಲ್ಲೇ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಪಾರ್ಶ್ವವಾಯುವಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ನರಗಳಲ್ಲಿನ ಅಡಚಣೆ.

ಪಾರ್ಶ್ವವಾಯುವಿಗೆ ತುತ್ತಾದ ಶೇ.99ಕ್ಕೂ ಹೆಚ್ಚು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿರುವುದು ಆತಂಕಕಾರಿ ಸಂಗತಿ. ಪಾರ್ಶ್ವವಾಯು ಸಂಭವಿಸಿದಾಗ ಕೇವಲ ಅರ್ಧದಷ್ಟು ರೋಗಿಗಳಿಗೆ ಮಾತ್ರ ಔಷಧ ಕೊಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ವೈದ್ಯರು. ಉಳಿದ ರೋಗಿಗಳು ಔಷಧದಿಂದಲೇ ವಂಚಿತರಾಗುತ್ತಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ.

ಭಾರತದ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಹಾಗೂ ಈ ರೋಗದ ಬಗ್ಗೆ ಅರಿವಿನ ಕೊರತೆಯೇ ಚಿಕಿತ್ಸೆಗೆ ಅಡ್ಡಿಯಾಗಿದೆ. ನರಗಳಲ್ಲಿನ ಅಡಚಣೆಯಿಂದ ಸ್ಟ್ರೋಕ್‌ಗೆ ತುತ್ತಾದ ರೋಗಿಗೆ ನಾಲ್ಕೂವರೆ ಗಂಟೆಯೊಳಗೆ ರೋಗಿಗೆ ಅದನ್ನು ಸರಿಪಡಿಸುವಂತಹ ಚುಚ್ಚುಮದ್ದು ನೀಡಿದರೆ ಮಾತ್ರ ಚಿಕಿತ್ಸೆ ಪ್ರಯೋಜನಕಾರಿಯಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.

ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಪಾರ್ಶ್ವವಾಯುವಿಗೆ ತುತ್ತಾದವರನ್ನು ಸಣ್ಣ ಆಸ್ಪತ್ರೆಗಳಿಗೆ ರೋಗಿಯನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಸೌಲಭ್ಯಗಳೇ ಇರುವುದಿಲ್ಲ. ಸೂಕ್ತ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ತಡವಾಗಿರುತ್ತದೆ.

ದೇಶದಲ್ಲಿ ಸುಮಾರು ಒಂದು ಮಿಲಿಯನ್ ರೋಗಿಗಳು ಮೆದುಳಿನ ನರಗಳಲ್ಲಿ ಅಡಚಣೆಯಿಂದ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಈ ಪೈಕಿ 5 ಸಾವಿರ ರೋಗಿಗಳಿಗೆ ಮಾತ್ರ ಕ್ಲಾಟ್‌ ಬಸ್ಟರ್ ಔಷಧ ದೊರೆಯುತ್ತದೆ. ಈ ಔಷಧಿಯನ್ನು ನೀಡಲು ಆಸ್ಪತ್ರೆಯಲ್ಲಿ CT ಸ್ಕ್ಯಾನ್ ಯಂತ್ರ ಇರಲೇಬೇಕು. ಕೇರಳ ಮತ್ತು ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಹೆಚ್ಚಿನ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯವಿಲ್ಲ.

ತಜ್ಞರೇ ಹೇಳುವ ಪ್ರಕಾರ ಯುವಜನರಲ್ಲಿ ಪಾರ್ಶ್ವವಾಯು ಕಾಯಿಲೆ ಹೆಚ್ಚಿದೆ. ಈ ಕಾಯಿಲೆಯಿಂದ ಬಳಲುತ್ತಿರುವ 25 ಪ್ರತಿಶತ ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆತಂಕಕಾರಿ ಸಂಗತಿ ಎಂದರೆ ಪಾರ್ಶ್ವವಾಯು ಹೆಚ್ಚಲು ಕಾರಣ ಮಾಲಿನ್ಯ.

ಪಾರ್ಶ್ವವಾಯುವಿಗೆ ಅತಿ ದೊಡ್ಡ ಕಾರಣ ರಕ್ತದೊತ್ತಡ ಎಂಬುದು ಅನೇಖ ವೈದ್ಯರ ಅಭಿಪ್ರಾಯ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಶೇ.70-80 ರಷ್ಟು ರೋಗಿಗಳು ಅದನ್ನು ನಿಯಂತ್ರಿಸುವುದಿಲ್ಲ. ಆದರೆ ಅಮೆರಿಕ ಮತ್ತು ನೆದರ್ಲೆಂಡ್‌ನಂತಹ ದೇಶಗಳಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಪಾರ್ಶ್ವವಾಯುವನ್ನು ನಿಯಂತ್ರಿಸಲಾಗ್ತಿದೆ. ರಕ್ತದೊತ್ತಡ ಮತ್ತು ಮಧುಮೇಹ ಎರಡನ್ನೂ ನಿಯಂತ್ರಣದಲ್ಲಿಟ್ಟರೆ ಪಾರ್ಶ್ವವಾಯು ಪ್ರಕರಣಗಳನ್ನು ಕಡಿಮೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read