ಇನ್ನು ಶಾಲೆಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಪೀರಿಯಡ್ ಪಾಠ: ದಸರಾ ರಜೆ ವಿಸ್ತರಣೆ ಹಿನ್ನೆಲೆ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ದಸರಾ ರಜೆ ವಿಸ್ತರಣೆಯಿಂದ ಕೊರತೆಯಾಗಿರುವ ಕಲಿಕಾ ಅವಧಿ ಸರಿದೂಗಿಸಲು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಉಳಿದಿರುವ ಶಾಲಾ ದಿನಗಳಲ್ಲಿ ನಿತ್ಯ ಒಂದು ಹೆಚ್ಚುವರಿ ಅವಧಿ ತರಗತಿ ಬೋಧನೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ.

ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೊರತೆಯಾಗುವ ಶಾಲಾ ದಿನಗಳ ಬೋಧನಾ ಕಲಿಕೆ ಸರಿದೂಗಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

2025-26 ನೇ ಸಾಲಿನಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು ಒಳಗೊಂಡ ಶೈಕ್ಷಣಿಕ ಮಾರ್ಗಸೂಚಿ ನೀಡಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ 2025-26 ನೇ ಸಾಲಿನ ದಸರಾ ರಜೆ ಅವಧಿಯನ್ನು ದಿನಾಂಕ: 22/09/2025 ರಿಂದ 07/10/2025 ರ ವರೆಗೆ ನಿಗದಿಗೊಳಿಸಲಾಗಿತ್ತು.

ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಈ ಅವಧಿಯಲ್ಲಿ ಕಳೆದುಕೊಳ್ಳುವ ಶಾಲಾ ದಿನಗಳು (ಕಾರ್ಯನಿರತ ದಿನಗಳು) 8,9,10,11,13 ರಿಂದ 18 ಆಗಿದ್ದು, ಒಟ್ಟಾರೆ 10 ಶಾಲಾ ದಿನಗಳ ಕೊರತೆಯಾಗಿದೆ. ಇದರಲ್ಲಿ 8 ಪೂರ್ಣದಿನ ಮತ್ತು 2 ಅರ್ಧದಿನಗಳಾಗಿರುತ್ತದೆ.

(ಎ) ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 45 ನಿಮಿಷಗಳು ಆಗಿದೆ.

8 ಪೂರ್ಣ ದಿನಗಳು 8*7-56 ಅವಧಿಗಳು

2 ಅರ್ಧ ದಿನಗಳು- 2*5=10 ಅವಧಿಗಳು

ಒಟ್ಟು 66 ಅವಧಿಗಳು

ಇದಕ್ಕೆ ಪರಿಹಾರವಾಗಿ ಕೊರತೆಯಾಗುವ ಕಲಿಕಾ ಅವಧಿಗಳನ್ನು ಸರಿದೂಗಿಸಲು ಹಾಗೂ ಕಲಿಕಾ ಕೊರತೆಯನ್ನು ಸರಿದೂಗಿಸಲು ಈ ಕೆಳಕಂಡ ಕ್ರಮಗಳನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಕೈಗೊಳ್ಳಲು ತಿಳಿಸಿದೆ.

ದಿನಾಂಕ:07.11.2025 ರಿಂದ 24.01.2026 ರವರೆಗೆ ಒಟ್ಟು 66 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.

ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 8.9.10 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.

ಜನವರಿ 2026 ರಿಂದ ಮಾರ್ಚ್ 2026(ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು.

10 ನೇ ತರಗತಿ (ಎಸ್.ಎಸ್.ಎಲ್.ಸಿ) ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ವಿಶೇಷ ಗಮನ ಹರಿಸಿ ಕ್ರಮವಹಿಸುವುದು.

(ಬಿ) ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 8 ಪೂರ್ಣ ದಿನ & 2 ಅರ್ಧ ದಿನಗಳು, ಪ್ರತಿ ಅವಧಿಯ ಸಮಯ 40 ನಿಮಿಷಗಳು ಆಗಿದೆ.

8 ಪೂರ್ಣ ದಿನಗಳು 8*8=64 ಅವಧಿಗಳು

2 ಅರ್ಧ ದಿನಗಳು 2*5=10 ಅವಧಿಗಳು

ಒಟ್ಟು 74 ಅವಧಿಗಳು

ದಿನಾಂಕ:07.11.2025 ರಿಂದ 05.02.2026 ರವರೆಗೆ ಒಟ್ಟು 74 ಕರ್ತವ್ಯದ ದಿನಗಳಂದು ಪ್ರತಿ ದಿನ ಹೆಚ್ಚುವರಿ ಅವಧಿಯನ್ನು ನಿರ್ವಹಿಸಿ ಕಲಿಕಾ ಅವಧಿಗಳನ್ನು ಸರಿದೂಗಿಸಿಕೊಳ್ಳುವುದು.

ಇದಕ್ಕಾಗಿ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7/8 ನೇ ತರಗತಿಗಳಿಗೆ ಈ ದಿನಗಳಲ್ಲಿ ಒಂದು ಹೆಚ್ಚುವರಿ ಅವಧಿಯನ್ನು ಶಾಲಾ ಪ್ರಾರಂಭದಲ್ಲಿ ಅಥವಾ ಶಾಲಾ ಅವಧಿ ನಂತರದಲ್ಲಿ ಆಯಾ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುವುದು.

ಜನವರಿ 2026 ರಿಂದ ಮಾರ್ಚ್ 2026 (ಪರೀಕ್ಷೆವರೆಗೆ) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವುದು ಎಂದು ಸೂಚನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read