ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಚಿತ್ರ ಫೆಬ್ರವರಿ 8 ರಂದು ರಾಜ್ಯದ್ಯಂತ ತೆರೆಕಂಡಿತ್ತು. ಅಂದುಕೊಂಡಂತೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿರುವ ಈ ಸಿನಿಮಾ ಇದೀಗ 25 ದಿನಗಳನ್ನು ಪೂರೈಸುವ ಮೂಲಕ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತಸವನ್ನು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ರೋಮ್ಯಾಂಟಿಕ್ ಲವ್ ಸ್ಟೋರಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿನಯ್ ರಾಜಕುಮಾರ್, ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಟ ಪ್ರಮುಖ ಪಾತ್ರದಲ್ಲಿದ್ದು, ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರು ರಮೇಶ್ ನಿರ್ಮಾಣ ಮಾಡಿದ್ದಾರೆ. ವೀರ ಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದು, ಆದಿ ಸಂಕಲನ, ಕಾರ್ತಿಕ್ ಶರ್ಮ ಮತ್ತು ಸಭಾ ಕುಮಾರ್ ಛಾಯಾಗ್ರಹಣವಿದೆ.
Romantic Hit #OnduSaralaPremaKathe Towards 25 Days.#RamMovies @vinayrajkumar @mallikasingh158 @SimpleSuni @swathishta @KRG_Studios #vinayrajkumar #mallikasingh #SimpleSuni #swathishta #KRGStudios pic.twitter.com/dnNAbgkj6S
— Popcorn Kannada (@PopcornKannada) March 1, 2024