ಒಮ್ಮೆ ರುಚಿ ನೋಡಿದರೆ ಮತ್ತೆ ಮತ್ತೆ ಸವಿಯಬೇಕೆನಿಸುವ ʼಹಯಗ್ರೀವʼ

ಅತಿ ಹೆಚ್ಚು ಸಿಹಿ ತಿನ್ನುವ ಜನರಲ್ಲಿ ಭಾರತೀಯರೇ ಹೆಚ್ಚಂತೆ. ಭಾರತದ ಪ್ರತೀ ಜಿಲ್ಲೆಯಲ್ಲಿ ನೂರಾರು ಬಗೆಯ ಸಿಹಿ ಭಕ್ಷ್ಯಗಳಿವೆ. ಸಾಂಪ್ರದಾಯಿಕ ಸಿಹಿ ತಿನಿಸು ಹಯಗ್ರೀವ ಅದರಲ್ಲೊಂದು. ಈ ವಿಧಾನದಲ್ಲಿ ಹಯಗ್ರೀವ ಮಾಡಿದರೆ ನೀವು ಬೆರಳು ಚಪ್ಪರಿಸೋದು ಗ್ಯಾರೆಂಟಿ.

ಒಂದು ಕಪ್ ಕಡಲೇಬೇಳೆಯನ್ನು 5-6 ಗಂಟೆಗಳ ಕಾಲ ಚೆನ್ನಾಗಿ ನೆನೆಸಿ. ಇದನ್ನ ಕುಕ್ಕರಿನಲ್ಲಿ ಬೇಯಿಸದೆ, ಪಾತ್ರೆಯಲ್ಲಿ ಮೃದುವಾಗಿ ಬೇಯಿಸಿ. ಒಂದು ಕಪ್ ಬೆಲ್ಲವನ್ನು ಪಾತ್ರೆಯಲ್ಲಿ ಕರಗಿಸಿ ಒಂದೆಳೆ ಪಾಕ ಮಾಡಿಕೊಳ್ಳಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕೂಡಿಸಿ.

ಈಗ ಬೇಯಿಸಿರುವ ಕಡಲೇಬೇಳೆಯನ್ನು ಬೆಲ್ಲದ ಮಿಶ್ರಣಕ್ಕೆ ಹಾಕಿ 3-4 ನಿಮಿಷ ಮಂದ ಉರಿಯಲ್ಲಿ ಚೆನ್ನಾಗಿ ತಿರುಗಿಸಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ, ದ್ರಾಕ್ಷಿ ಗೋಡಂಬಿಯನ್ನು ಕೆಂಪಗೆ ಹುರಿದು, ಕೊನೆಯದಾಗಿ ಸಿದ್ಧವಿರುವ ಬೆಲ್ಲ, ಕಡಲೆಬೇಳೆಯ ಮಿಶ್ರಣದ ಜೊತೆ ಸೇರಿಸಿದರೆ ಘಮ ಘಮ ಎನ್ನುವ ಹಯಗ್ರೀವ ಸವಿಯಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read