‘ಲಕ್ಷ್ಮಿ ಪೂಜೆ’ ದಿನ ಈ ವಸ್ತು ಕಣ್ಣಿಗೆ ಬಿದ್ರೆ ಅದೃಷ್ಟ ಖುಲಾಯಿಸಿದಂತೆ

ಹಿಂದೂ ಧರ್ಮದಲ್ಲಿ ದೀಪಾವಳಿಗೆ ಮಹತ್ವದ ಸ್ಥಾನವಿದೆ. ದೀಪಾವಳಿಯ ಅಮವಾಸ್ಯೆಯ ಸಂಜೆ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡುತ್ತಾಳೆಂಬ ನಂಬಿಕೆಯಿದೆ. ನರಕ ಚತುರ್ಥಿ ಮರುದಿನ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.

ಲಕ್ಷ್ಮಿ ಮನೆ ಪ್ರವೇಶಕ್ಕೆ ಒಂದು ತಿಂಗಳಿನಿಂದಲೇ ತಯಾರಿ ನಡೆಯುತ್ತದೆ. ಮನೆಯನ್ನು ಸ್ವಚ್ಛಗೊಳಿಸಿ, ಲಕ್ಷ್ಮಿ ಪೂಜೆಗೆ ಸಿದ್ಧತೆ ಮಾಡಲಾಗುತ್ತದೆ. ವಿಧಿ ವಿಧಾನದಂತೆ ಲಕ್ಷ್ಮಿ, ಗಣೇಶನ ಪೂಜೆ ಮಾಡಲಾಗುತ್ತದೆ. ಅಂಗಡಿ, ಮನೆ ಸೇರಿದಂತೆ ಪ್ರತಿಯೊಂದು ಕಡೆ ಲಕ್ಷ್ಮಿ ಆರಾಧನೆ ನಡೆಯುತ್ತದೆ. ತಾಯಿ ಲಕ್ಷ್ಮಿ ದೀಪಾವಳಿಯ ಅಮವಾಸ್ಯೆ ಸಂಜೆ ಮನೆ ಪ್ರವೇಶ ಮಾಡಿದ್ದಾಳ ಎನ್ನುವ ಬಗ್ಗೆ ಕೆಲವೊಂದು ಸಂಕೇತಗಳು ಭಕ್ತರಿಗೆ ಸಿಗುತ್ತವೆ.

ಲಕ್ಷ್ಮಿ ಪೂಜೆ ದಿನ ರಾತ್ರಿ ಗೂಬೆ ನಿಮ್ಮ ಕಣ್ಣಿಗೆ ಬಿದ್ರೆ ನಿಮ್ಮ ಅದೃಷ್ಟ ಬದಲಾಗ್ತಿದೆ ಎಂದೇ ಅರ್ಥ. ತಾಯಿ ಲಕ್ಷ್ಮಿಯ ವಾಹನ ಗೂಬೆ. ಇದು ಕಾಣಿಸಿಕೊಂಡ್ರೆ ಮಂಗಳಕರ.

ದೀಪಾವಳಿ ದಿನ ಬೆಕ್ಕು ಮನೆಗೆ ಬಂದು ಹಾಲು ಕುಡಿದ್ರೆ ಇದು ಶುಭ ಸಂಕೇತ. ತಾಯಿ ಕೃಪೆ ವರ್ಷಪೂರ್ತಿ ನಿಮ್ಮ ಮೇಲಿರುತ್ತದೆ ಎಂದರ್ಥ.

ಲಕ್ಷ್ಮಿ ಪೂಜೆಯ ರಾತ್ರಿ ಹೆಗ್ಗಣ ಕಾಣಿಸಿಕೊಂಡ್ರೆ ಶುಭ ಸಂಕೇತ. ನಿಮ್ಮ ಕಣ್ಣಿಗೆ ಈ ದಿನ ರಾತ್ರಿ ಹೆಗ್ಗಣ ಕಾಣಿಸಿಕೊಂಡ್ರೆ ಆರ್ಥಿಕ ವೃದ್ಧಿಯಾಗಲಿದೆ ಎಂದರ್ಥ.

ದೀಪಾವಳಿ ದಿನ ಹಲ್ಲಿ ಗೋಡೆ ಮೇಲೆ ಕಾಣಿಸಿಕೊಂಡ್ರೆ ತಾಯಿ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read