ʼಸಿಂಪಲ್ʼ ಆಗಿದ್ದಕ್ಕೆ ಅವಮಾನಿತಗೊಂಡಿದ್ದರಂತೆ ಸುಧಾ ಮೂರ್ತಿ….!

ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರು ತಮ್ಮ ನಮ್ರತೆ ಮತ್ತು ಆಡಂಬರವಿಲ್ಲದ ಜೀವನಶೈಲಿಯನ್ನು ಪಾಲಿಸುತ್ತಾರೆ. ಆದರೂ, ಅನೇಕ ಋಣಾತ್ಮಕ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವುದು ವಿಚಿತ್ರವೆನಿಸುತ್ತದೆ.

ಇನ್ಫೋಸಿಸ್ ಸಂಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆಯಾಗಿರುವ ಸುಧಾ ಮೂರ್ತಿ ಅವರು ‘ದಿ ಕಪಿಲ್ ಶರ್ಮಾ ಶೋ’ದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದ ಆಗರ್ಭ ಸಿರಿವಂತರಲ್ಲಿ ಒಬ್ಬರಾಗಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವರು ಜೀವನ ನಡೆಸುತ್ತಿದ್ದಾರೆ.

ತಮ್ಮ ಸಿಂಪ್ಲಿಸಿಟಿಯಿಂದ ಕೆಲವೊಂದು ಅವಮಾನಕಾರಿ ಪದಗಳನ್ನೂ ಕೇಳುವಂತಾಯ್ತು ಎಂದು ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಹೇಳಿದ್ರು. ಒಮ್ಮೆ ಲಂಡನ್ ವಿಮಾನ ನಿಲ್ದಾಣದಲ್ಲಿ ನಿಂತಿರಬೇಕಿದ್ರೆ ಮಹಿಳೆಯರಿಬ್ಬರು ತನ್ನನ್ನು ಅವಹೇಳನ ಮಾಡಿದ್ದಾಗಿ ಹೇಳಿದ್ದಾರೆ.

ತಾನು ಸೆಲ್ವಾರ್ ಕಮೀಜ್ ಧರಿಸಿದ್ದೆ. ಲಂಡನ್‌ನಿಂದ ಬೆಂಗಳೂರಿಗೆ ವಿಮಾನ ಹಿಡಿಯಲು ಬಿಸಿನೆಸ್ ಕ್ಲಾಸ್ ಟಿಕೆಟ್ ಹೊಂದಿದ್ದೆ. ಬಿಸಿನೆಸ್ ಕ್ಲಾಸ್ ಟಿಕೆಟ್‌ನೊಂದಿಗೆ ಸಲ್ವಾರ್ ಕಮೀಜ್ ಧರಿಸಿ, ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದೆ. ತಾನು ಸಲ್ವಾರ್ ಕಮೀಜ್‌ನಲ್ಲಿದ್ದ ಕಾರಣ ಇಬ್ಬರು ಸಹ-ಪ್ರಯಾಣಿಕರು ನನ್ನನ್ನು ಹೀಯಾಳಿಸಿದ್ರು ಎಂದು ದಿ ಕಪಿಲ್ ಶರ್ಮಾ ಶೋ ನಲ್ಲಿ ಶ್ರೀಮತಿ ಮೂರ್ತಿ ಹೇಳಿದ್ದಾರೆ.

ಹಲವಾರು ಬಳಕೆದಾರರು ಸುಧಾಮೂರ್ತಿ ಅವರನ್ನು ಬೆಂಬಲಿಸಿದ್ದಾರೆ. ಜನರು ಅವರನ್ನು ಏಕೆ ಅನಗತ್ಯವಾಗಿ ಟ್ರೋಲ್ ಮಾಡುತ್ತಿದ್ದಾರೆ ? ಅವರ ಕಂಪನಿಯು ದೇಶದ ಎರಡನೇ ಅತಿದೊಡ್ಡ ಉದ್ಯೋಗದಾತವಾಗಿದೆ. ಕನಿಷ್ಠ ಗೌರವಿಸಲು ಸಾಧ್ಯವಾಗದಿದ್ದರೆ ಹೀಯಾಳಿಸಬೇಡಿ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ, ಸುಧಾ ಮೂರ್ತಿ ಅವರಿಗೆ ಈ ವರ್ಷ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read