ಸಹೋದರಿ ಮೇಲೆ ಅತ್ಯಾಚಾರವೆಸಗಿ ಗರ್ಭ ಧರಿಸುವಂತೆ ಮಾಡಿದ್ದ ಸಹೋದರ; ರಕ್ಷಾ ಬಂಧನ ದಿನದಂದು ಮಹತ್ವದ ತೀರ್ಪು ಪ್ರಕಟ

ಭುವನೇಶ್ವರ: ಸಹೋದರಿಯನ್ನೇ ಅತ್ಯಾಚಾರ ಮಾಡಿದ್ದಲ್ಲದೆ, ಆಕೆ ಗರ್ಭ ಧರಿಸುವಂತೆ ಮಾಡಿದ ಸಹೋದರನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಒಡಿಶಾ ಹೈಕೋರ್ಟ್ ಬುಧವಾರದಂದು ಮಹತ್ತರ ತೀರ್ಪು ನೀಡಿದೆ.

ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೃಢೀಕರಿಸಿ ಅಣ್ಣ-ತಂಗಿಯರ ಬಂಧ ರಕ್ಷ ಬಂಧನದಂದೇ ಹೈಕೋರ್ಟ್ ಈ ತೀರ್ಪು ನೀಡಿದೆ. ಬಾಲಕಿಯ 14ನೇ ವಯಸ್ಸಿನಲ್ಲಿ ಆಕೆ ಗರ್ಭಿಣಿಯಾಗಲು ಕಾರಣನಾದ ಸಹೋದರನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಎಸ್ ಕೆ ಸಾಹೂ ಅಪರಾಧಿಯ ಮನವಿ ಅರ್ಜಿಯನ್ನು ವಜಾಗೊಳಿಸಿದರು. ಅಲ್ಲದೆ ಹೆಚ್ಚುವರಿಯಾಗಿ 40,000 ರೂ. ದಂಡವನ್ನು ಪಾವತಿಸಲು ವಿಫಲವಾದರೆ ಅಪರಾಧಿಗೆ ಹೆಚ್ಚುವರಿ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಆದೇಶಿಸಿದ್ರು. ರಕ್ಷಾ ಬಂಧನದ ಸಂದರ್ಭದಲ್ಲಿ ಇಂತಹ ಪ್ರಕರಣದಲ್ಲಿ ತೀರ್ಪು ನೀಡಬೇಕಾಗಿ ಬಂದಿರುವುದಕ್ಕೆ ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದರು.

ತನ್ನ ಸಹೋದರಿಯನ್ನು ರಕ್ಷಿಸಲು ಮಾತ್ರವಲ್ಲದೆ ತನ್ನ ಕೊನೆಯ ಉಸಿರಿನವರೆಗೂ ಅವಳನ್ನು ಪೋಷಿಸುವ ಗಂಭೀರ ಪ್ರತಿಜ್ಞೆಯನ್ನು ಸಹೋದರ ತೆಗೆದುಕೊಳ್ಳುವ ಮಂಗಳಕರ ದಿನದಂದು ಈ ಪ್ರಕರಣವನ್ನು ಆಲಿಸುವುದು ಮತ್ತು ತೀರ್ಪು ನೀಡುವುದು ಆಘಾತಕಾರಿಯಾಗಿದೆ ಎಂದು ನ್ಯಾಯಮೂರ್ತಿ ಸಾಹೂ ಹೇಳಿದ್ರು.

ಮೇ 2018 ಮತ್ತು ಮೇ 2019 ರ ನಡುವೆ ತನ್ನ ತಂಗಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ಮಲ್ಕಾನ್‌ಗಿರಿ ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಈ ವ್ಯಕ್ತಿಯನ್ನು ಈ ಹಿಂದೆ ತಪ್ಪಿತಸ್ಥನೆಂದು ನಿರ್ಣಯಿಸಿತ್ತು. ಜೊತೆಗೆ ಅತ್ಯಾಚಾರ ಎಸಗಿದ್ದನ್ನು ಇತರರಿಗೆ ಬಹಿರಂಗಪಡಿಸದಂತೆ ತನ್ನ ಸಹೋದರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಜನವರಿ 2020 ರಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read