Video | ರೈಲು ಹತ್ತಲು ಹೋಗಿ ಜಾರಿಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಿಬ್ಬಂದಿ

ರೈಲು ಹೊರಟ ತಕ್ಷಣ ಅದನ್ನು ಹತ್ತಲು ಹೋಗಿ ಸಾವಿನ ಬಾಯಿಗೆ ಸಿಲುಕಿರುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಕೆಲವು ಸಲ ಅದೃಷ್ಟ ಕೈಹಿಡಿದರೆ ರೈಲ್ವೆ ಸಿಬ್ಬಂದಿ ಸಾವಿನ ಬಾಯಿಯಿಂದ ಪ್ರಯಾಣಿಕರನ್ನು ಬಚಾವ್​ ಮಾಡುವುದು ಇದೆ.

ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಉತ್ತರ ಪ್ರದೇಶದ ಅವ್ರೋಹಾದಲ್ಲಿ ಈ ಘಟನೆ ನಡೆದಿದೆ. ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಿಬ್ಬಂದಿ ರಕ್ಷಿಸಿದ್ದಾರೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ವ್ಯಕ್ತಿ ರೈಲಿನ ಕೆಳಗೆ ಬಿದ್ದು ಸಾಯುತ್ತಿದ್ದ.

ರೈಲು ಸಂಖ್ಯೆ 12036 (ಪೂರ್ಣಗಿರಿ ಜನಶತಾಬ್ದಿ ಎಕ್ಸ್‌ಪ್ರೆಸ್) ಹಾದುಹೋಗುವ ಸಂದರ್ಭದಲ್ಲಿ ಈ ಘಟನೆ ದಾಖಲಾಗಿದೆ.

ಇಡೀ ಘಟನೆಯನ್ನು ಸೆರೆಹಿಡಿಯುವ ದೃಶ್ಯಾವಳಿಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರಯಾಣಿಕರು ಇಂತಹ ಅಪಾಯಕಾರಿ ಕೆಲಸ ಮಾಡದಂತೆ ರೈಲ್ವೆ ಇಲಾಖೆ ಹೇಳಿದೆ.

ಟಿಟಿಇ ಮತ್ತು ಪೊಲೀಸ್ ಅಧಿಕಾರಿಯನ್ನು ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಕೈಲಾಶ್ ಚಂದ್ರ ಮತ್ತು ಆರ್‌ಪಿಎಫ್ ಕಾನ್‌ಸ್ಟೆಬಲ್ ಎಂ. ವಸೀಮ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

https://twitter.com/RPF_INDIA/status/1640277630497996800?ref_src=twsrc%5Etfw%7Ctwcamp%5Etweetembed%7Ctwterm%5E1640277630497996800%7Ctwgr%5Ebe2389d54e9a60fdb6b56f5d103805735ee59bf8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-up-man-tries-to-board-moving-train-at-amroha-alert-tte-rpf-rescue-passenger-after-he-nearly-slides-into-footboard-platform-gap

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read