ತಂಪು ಪಾನೀಯ ಸಾಗಿಸ್ತಿದ್ದ ಟ್ರಕ್ ರಸ್ತೆ ಮೇಲೆ ಉರುಳಿ ಬೀಳ್ತಿದ್ದಂತೆ ಜನ ಪಾನೀಯ ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ-ರತ್ನನಗರಿ ರಸ್ತೆಯ ಪುಯಿಖಾಡಿ ಪ್ರದೇಶದ ಬಳಿ ತಂಪು ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಯಿತು.
ಟ್ರಕ್ ಅಪಘಾತದ ನಂತರ ರಸ್ತೆಯಲ್ಲಿ ಸ್ಥಳೀಯರು ಮತ್ತು ಪ್ರಯಾಣಿಕರು ಪಾನೀಯವನ್ನ ಲೂಟಿ ಮಾಡಲು ನಿಂತರು. ಹಲವರು ತಮ್ಮ ವಾಹನಗಳಿಗೆ ಪಾನೀಯ ಬಾಟಲಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಈ ಪ್ರಕರಣವನ್ನು ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತದ ಸ್ಥಳದಲ್ಲಿ ಲೂಟಿ ಮಾಡುವಾಗ ಕೆಲವು ವ್ಯಕ್ತಿಗಳು ತಮ್ಮ ಗುರುತನ್ನು ಬಹಿರಂಗಪಡಿಸದಿರಲು ಕರವಸ್ತ್ರದಿಂದ ಮುಖವನ್ನು ಮರೆಮಾಡುತ್ತಿರುವುದು ಕಂಡುಬಂದಿದೆ.
ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಚಾಲಕ ಮತ್ತು ಅವನ ಜೊತೆಗಿದ್ದವರಿಗೆ ಗಾಯಗಳಾಗಿದ್ದು, ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಇಂದೋರ್ ನಿವಾಸಿಗಳಾದ ರಾಮಲಿಂಗ್ ಸಿಂಗ್ (30) ಮತ್ತು ಗುರ್ ಸಿಂಗ್ (22) ಎಂದು ಗುರುತಿಸಲಾಗಿದೆ.
https://twitter.com/Aapalkolhapur/status/1622069418380660736?ref_src=twsrc%5Etfw%7Ctwcamp%5Etweetembed%7Ctwterm%5E1622069418380660736%7Ctwgr%5E6b63cbf95873b59a196a27645b5c9c5f22c3b470%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-truck-carrying-cold-drinks-meets-with-an-accident-on-kolhapur-ratnagiri-road-driver-injured