On Camera: ಮಹಿಳೆಯೊಂದಿಗೆ ಕಾಂಗ್ರೆಸ್ ಶಾಸಕನ ಅನುಚಿತ ವರ್ತನೆ ವಿಡಿಯೋ ವೈರಲ್

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರ ಈವೆಂಟ್‌ ವೊಂದರಲ್ಲಿ ಮಹಿಳೆಯೊಂದಿಗೆ ಅನುಚಿವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ

ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಕೊಂಡೂರಿನ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರು ಮಹಿಳೆಯೊಂದಿಗೆ ನಡೆದುಕೊಂಡ ರೀತಿಗೆ ಭಾರೀ ಟೀಕೆ ವ್ಯಕ್ತವಾಗಿದೆ. ಇದು ಯಾವ ಘಟನೆ ಎಂಬುದರ ನಿಖರವಾದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇಡೀ ಕೃತ್ಯವನ್ನು ಸೆರೆಹಿಡಿಯುವ ವಿಡಿಯೋ ವೈರಲ್ ಆಗಿದೆ.

ಪದೇ ಪದೇ ದೂರ ಹೋಗಲು ಯತ್ನಿಸಿದ ಮಹಿಳೆಯ ಕೆನ್ನೆಗೆ ಕವ್ವಂಪಲ್ಲಿ ಸತ್ಯನಾರಾಯಣ ಅವರು ಕೇಕ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಒಂದೇ ಬಾರಿ ಅಲ್ಲ, ಕಾಂಗ್ರೆಸ್ ಶಾಸಕ ಹಲವು ಬಾರಿ ಮಹಿಳೆಗೆ ಹತ್ತಿರವಾಗುತ್ತಿರುವುದು ಕಂಡುಬಂದಿದೆ. ಪ್ರಸ್ತುತ ತೆಲಂಗಾಣದಲ್ಲಿ ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಸಚಿವ ಪೊನ್ನಂ ಪ್ರಭಾಕರ್ ಅವರ ಸಮ್ಮುಖದಲ್ಲಿ ಇದೆಲ್ಲವೂ ನಡೆದಿದೆ.

ಹೊಸ ವರ್ಷಾಚರಣೆಯ ವೇಳೆ ನಡೆದ ಘಟನೆಯ ವಿಡಿಯೋ ಇದು ಎಂದು ಹೇಳಲಾಗಿದ್ದು, ಕಾಂಗ್ರೆಸ್ ಶಾಸಕನ ವರ್ತನೆಗೆ ನೆಟಿಜನ್‌ಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ.

ಮನಕೊಂಡೂರ್ ಅಸೆಂಬ್ಲಿ ಕ್ಷೇತ್ರವು SC ಮೀಸಲು ಕ್ಷೇತ್ರವಾಗಿದೆ. ಇದು ಕರೀಂನಗರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕವ್ವಂಪಲ್ಲಿ ಸತ್ಯನಾರಾಯಣ ಅವರು ಗೆದ್ದಿದ್ದರು.

https://twitter.com/ActualIndia/status/1742055696542093467

https://twitter.com/TeluguScribe/status/1742065452556394986

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read