ಸೂಪರ್‌ ಮಾರ್ಕೆಟ್‌ನಲ್ಲಿ ಐಸ್ಕ್ರೀಂ ಫ್ರೀಜ಼ರ್‌‌, ಒಂದೂಕಾಲು ಲಕ್ಷ ನಗದು ದೋಚಿದವರ ಬಂಧನ

ಮುಂಬಯಿಯ ಬೋರಿವಲಿಯ ಸೂಪರ್‌ ಮಾರ್ಕೆಟ್‌ನಲ್ಲಿಟ್ಟಿದ್ದ ಡೀಪ್‌ ಫ್ರೀಜ಼ರ್‌ ಹಾಗೂ 1.25 ಲಕ್ಷ ರೂ ನಗದನ್ನು ಕದ್ದ ಇಬ್ಬರು ಕಳ್ಳರನ್ನು ಘಟನೆ ನಡೆದ ಮೂರೇ ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ.

ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಒಮ್ರಾವ್‌ ರಾಬ್ರಿಯೋ, 24, ಮತ್ತು ವೋತಾರಾಂ ಮೇಘ್ವಾಲ್, 25, ಎಂದು ಇಬ್ಬರನ್ನೂ ಗುರುತಿಸಲಾಗಿದೆ. ಇವರೊಂದಿಗೆ ಇದ್ದ ಮತ್ತೊಬ್ಬನ ಶೋಧಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಮೇ 28ರ ಬೆಳಿಗ್ಗೆ 2 ಗಂಟೆಗೆ ಈ ಅಪರಾಧ ನಡೆದಿದ್ದು, ಸೂಪರ್‌ ಮಾರ್ಕೆಟ್ ಮಾಲೀಕ ಜಯೇಶ್ ಪಟೇಲ್ ಕೊಟ್ಟ ದೂರಿನ ಅನ್ವಯ ಕ್ರಮ ತೆಗೆದುಕೊಂಡಿದ್ದಾಗಿ ಇಲ್ಲಿನ ಎಂಎಚ್‌ಬಿ ಕಾಲೋನಿ ಪೊಲೀಸರು ತಿಳಿಸಿದ್ದಾರೆ. ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಸೆರೆ ಹಿಡಿದ ತುಣುಕುಗಳನ್ನು ಅಧ್ಯಯನ ಮಾಡಿ ತನಿಖೆ ಮಾಡಲಾಗಿದೆ.

ಫ್ರೀಜ಼ರ್‌‌ ಕದ್ದು ಅದನ್ನು ಟೆಂಪೋಗೆ ತುಂಬುತ್ತಿದ್ದ ಮೂವರನ್ನು ವಿಡಿಯೋದಲ್ಲಿ ನೋಡಿದ ಪೊಲೀಸರು ಅವರ ಟೆಂಪೋ ಹಾಗೂ ಮೊಬೈಲ್ ನಂಬರ್‌ ಜಾಡು ಹಿಡಿದು ಅವರ ಪತ್ತೆಗೆ ಜಾಲ ಬೀಸಿದ್ದಾರೆ.

ತಾಂತ್ರಿಕ ತನಿಖಾ ತಂಡ ಹಾಗೂ ವಿಶ್ವಾಸಾರ್ಹ ಮೂಲಗಳ ನೆರವಿನಿಂದ ಬಂಧಿಯಾದ ಇಬ್ಬರನ್ನು ನಾಲಾಸಪೋರಾ ಬಳಿ ಸೆರೆ ಹಿಡಿಯಲಾಗಿದೆ. 19,000 ರೂಪಾಯಿ ಮೌಲ್ಯದ ಐಸ್ಕ್ರೀಂ ಇದ್ದ ಫ್ರೀಜ಼ರ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಐಪಿಸಿ 379 (ಕಳ್ಳತನ) ಅಡಿ ಪ್ರಕರಣ ದಾಖಲಿಸಲಾಗಿದೆ.

https://twitter.com/sirajnoorani/status/1664407666670841856?ref_src=twsrc%5Etfw%7Ctwcamp%5Etweetembed%7Ctwterm%5E1664

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read