ದಕ್ಷಿಣ ಕೊರಿಯಾದ ಮಹಿಳಾ ವ್ಲಾಗರ್ ಗೆ ತನ್ನ ಜನನಾಂಗ ತೋರಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ
ರಾಜಸ್ತಾನದ ಜೋಧ್‌ಪುರದ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ದಕ್ಷಿಣ ಕೊರಿಯಾದ ವ್ಲಾಗರ್ ತನ್ನ ಫೋನ್‌ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದು ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಿದ್ದರು.
ದೀಪಕ್ ಎಂದು ಗುರುತಿಸಲಾದ ಆರೋಪಿಯು ಸೋಮವಾರ ಬೆಳಿಗ್ಗೆ ಪ್ರವಾಸಿ ತಾಣವಾದ ಪಚೇಟಿಯಾ ಹಿಲ್‌ನಲ್ಲಿ ಮಹಿಳೆಯನ್ನು ಒಬ್ಬಂಟಿಯಾಗಿ ಕಂಡು ಸ್ವಲ್ಪ ಸಮಯದವರೆಗೆ ಆಕೆಯನ್ನು ಹಿಂಬಾಲಿಸುತ್ತಿದ್ದನು. ವ್ಲಾಗರ್ ಅವನ ಬಳಿಗೆ ಬರುತ್ತಿದ್ದಂತೆ ಅವನು ತನ್ನ ಪ್ಯಾಂಟ್ ಕೆಳಕ್ಕೆ ಇಳಿಸಿ ಜನನಾಂಗ ತೋರಿಸುತ್ತಾ ನಿಂತಿದ್ದನು. ಇದರಿಂದ ವಿಚಲಿತರಾದ ಮಹಿಳಾ ವ್ಲಾಗರ್ ಕಿರುಚುತ್ತಾ ಸ್ಥಳದಿಂದ ಓಡಿದ್ದಾರೆ.
ದೀಪಕ್ ಹತ್ತಿರದ ಪ್ರದೇಶದ ನಿವಾಸಿ ಎಂದು ತಿಳಿಸಿರುವ ಪೊಲೀಸರು “ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದು, ತಿರುಗಾಡುತ್ತಿರುತ್ತಾನೆ. ಘಟನೆಯ ಬಗ್ಗೆ ಪ್ರವಾಸಿಗರು ಯಾವುದೇ ದೂರು ನೀಡದ ಕಾರಣ ನಾವು ಶಾಂತಿ ಕದಡಿದ ಕಾರಣಕ್ಕಾಗಿ ಅವರನ್ನು ಬಂಧಿಸಿದ್ದೇವೆ” ಎಂದು ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ವಿಡಿಯೋವನ್ನ ಹಂಚಿಕೊಂಡು ಕೃತ್ಯವನ್ನು ಖಂಡಿಸಿದ್ದಾರೆ.
“ಜೋಧ್‌ಪುರದಲ್ಲಿ ತನಗೆ ಲೈಂಗಿಕ ಕಿರುಕುಳದ ವಿಡಿಯೋವನ್ನು ಪೋಸ್ಟ್ ಮಾಡಿದ ಕೊರಿಯನ್ ವ್ಲಾಗರ್‌ನ ಈ ವೀಡಿಯೊವನ್ನು ನೋಡಿದೆ. ಇದು ಅತ್ಯಂತ ಅಸಹ್ಯಕರ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಈ ರೀತಿಯ ಜನರು ನಮ್ಮ ಮಹಾನ್ ದೇಶದ ಇಮೇಜ್ ಅನ್ನು ಹಾಳು ಮಾಡುತ್ತಿದ್ದಾರೆ. ನಾನು ಅಶೋಕ್ ಗೆಹ್ಲೋಟ್ ಅವರಿಗೆ ಈ ಬಗ್ಗೆ ಬಲವಾದ ಕ್ರಮ ತೆಗೆದುಕೊಳ್ಳಲು ಪತ್ರ ಬರೆಯುತ್ತೇನೆ” ಎಂದಿದ್ದಾರೆ.
https://twitter.com/SwatiJaiHind/status/1648215381520310272?ref_src=twsrc%5Etfw%7Ctwcamp%5Etweetembed%7Ctwterm%5E1648215381520310272%7Ctwgr%5E72483bfc71e4cbea45649203b9f259d72cf11c5d%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Foncamerajodhpurmanflashesatkoreanvloggerarrested-newsid-n491279684