ಬಹುಕೋಟಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್, ಬಂಧನಕ್ಕೊಳಗಾಗಿ ನವದೆಹಲಿಯ ಮಂಡೋಲಿ ಜೈಲಿನಲ್ಲಿದ್ದು, ಈತನ ಐಷಾರಾಮಿ ಜೀವನದ ಕುರಿತು ಈಗಾಗಲೇ ಹಲವು ವಿಷಯಗಳು ಬಹಿರಂಗವಾಗಿದ್ದವು. ಈತ ಜೈಲಿನ ತನ್ನ ಸೆಲ್ ಗೆ ಕೆಲ ನಟಿಯರನ್ನೂ ಕರೆಸಿಕೊಂಡಿದ್ದ ವಿಷಯ ತನಿಖೆ ವೇಳೆ ಕಂಡು ಬಂದಿತ್ತು.
ಹೀಗೆ ತನ್ನ ಬಳಿಗೆ ಬಂದ ನಟಿಯರಿಗೆ ಸುಕೇಶ್ ಚಂದ್ರಶೇಖರ್ ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಡುಗೊರೆಗಳು, ಐಷಾರಾಮಿ ಕಾರುಗಳನ್ನು ನೀಡಿದ್ದು, ಇದೀಗ ಈ ನಟಿಯರು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುವಂತಾಗಿದೆ. ಇಷ್ಟಾದರೂ ಕೂಡ ಸುಕೇಶ್ ಚಂದ್ರಶೇಖರ್ ಐಷಾರಾಮಿ ಬದುಕು ಮುಂದುವರೆದಿದೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ.
ಆತನಿದ್ದ ಸೆಲ್ ಮೇಲೆ ಮಂಡೋಲಿ ಜೈಲಾಧಿಕಾರಿ ದೀಪಕ್ ಶರ್ಮ ಹಾಗೂ ಜೈ ಸಿಂಗ್ ಮತ್ತಿತರ ಸಿಬ್ಬಂದಿ ದಾಳಿ ನಡೆಸಿದ್ದು ಈ ವೇಳೆ ಗುಸ್ಸಿ ಕಂಪನಿಯ ಶೂ, ದುಬಾರಿ ಬೆಲೆಯ ಪ್ಯಾಂಟುಗಳು ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ. ಈ ವೇಳೆ ಸುಕೇಶ್ ಚಂದ್ರಶೇಖರ್ ಕಣ್ಣೀರಿಟ್ಟಿದ್ದು, ಗುರುವಾರದಂದು ದಾಳಿಯ ಸಿಸಿ ಟಿವಿ ದೃಶ್ಯಾವಳಿಯನ್ನು ಹಂಚಿಕೊಳ್ಳಲಾಗಿದೆ.
https://twitter.com/ANI/status/1628636642906087427?ref_src=twsrc%5Etfw%7Ctwcamp%5Etweetembed%7Ctwterm%5E1628636642906087427%7Ctwgr%5Efbe86770ff193d8476f436e47288e9ba1a508868%7Ctwcon%5Es1_&ref_url=https%3A%2F%2Fwww.freepressjournal.in%2Findia%2Fon-camera-conman-sukesh-chandrasekhars-cell-raided-luxury-items-found-cctv-footage-goes-viral