Watch Video | ನೋಡನೋಡುತ್ತಿದ್ದಂತೆ ಗಿರಗಟ್ಲೆಯಂತೆ ತಿರುಗಿ ಪತನಗೊಂಡ ಹೆಲಿಕಾಪ್ಟರ್

ನಾಲ್ಕು ಮಂದಿ ಸಮವಸ್ತ್ರಧಾರಿಗಳನ್ನು ಹೊತ್ತೊಯ್ಯುತ್ತಿದ್ದ ಕೊಲಂಬಿಯನ್ ಮಿಲಿಟರಿ ಹೆಲಿಕಾಪ್ಟರ್‌ ಒಂದು ಕ್ಯುಬಿಡೋ ಎಂಬ ನಗರದ ಮೇಲೆ ನೆಲಪ್ಪಳಿಸಿದ ಪರಿಣಾಮ, ಒಳಗಿದ್ದವರೆಲ್ಲಾ ಮೃತಪಟ್ಟಿದ್ದಾರೆ. ಆಲ್ಟೋ ಹಾಗೂ ಮೆಡಿಯೋ ಬೌಡೋದಲ್ಲಿ ಸೇವೆಯಲ್ಲಿರುವ ಸೈನಿಕರಿಗೆ ಆಹಾರ ಪೂರೈಕೆ ಮಾಡಲು ಹೊರಟಿದ್ದ ವೇಳೆ ಹೆಲಿಕಾಪ್ಟರ್‌ ಪತನಗೊಂಡಿದೆ.

ಆರಂಭದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಕಾಣೆಯಾಗಿದ್ದಾರೆ ಎಂದು ವರದಿ ನೀಡಲಾಗಿತ್ತು. ಇಬ್ಬರು ಹೆಲಿಕಾಪ್ಟರ್‌ನಿಂದ ನೆಗೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ ಕಾರಣ ಈ ಗೊಂದಲ ಸೃಷ್ಟಿಯಾಗಿತ್ತು. ಆದರೆ ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲ ನಾಲ್ವರು ಪ್ರಯಾಣಿಕರು ಅಸುನೀಗಿದ್ದಾರೆ ಎಂದು ಬಳಿಕ ಸ್ಪಷ್ಟಪಡಿಸಲಾಗಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಯಾರೂ ಬದುಕುಳಿದಿಲ್ಲ ಎಂದು ಕೊಲಂಬಿಯನ್ ಅಧ್ಯಕ್ಷ ಗಸ್ತಾವೋ ಪೆಟ್ರೋ ತಿಳಿಸಿದ್ದು, ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

https://twitter.com/Kiosk83448959/status/1637803921220554752?ref_src=twsrc%5Etfw%7Ctwcamp%5Etweetembed%7Ctwterm%5E1637803921220554752%7Ctwgr%5E1fc239afaa0f1d7948112aad01f9577044223198%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-colombian-military-helicopter-crashes-leaving-all-4-crew-members-dead

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read