ಸುಂಟರಗಾಳಿಯಂತೆ ನುಗ್ಗಿಬಂದು ಪಲ್ಟಿಹೊಡೆದ ಕಾರು: ನಾಲ್ವರು ಅಪ್ರಾಪ್ತರಿಗೆ ಗಂಭೀರ ಗಾಯ

ಅತಿ ವೇಗ-ತಿಥಿ ಬೇಗ ಅನ್ನೋ ಮಾತೊಂದು ಇದೆ. ಈ ಮಾತು ಅಕ್ಷರಶಃ ನಿಜ. ಅದರೂ ಕೆಲವರು ಈ ಮಾತನ್ನ ನಿರ್ಲಕ್ಷಿಸಿ ರಸ್ತೆಗಳಲ್ಲಿ ವಾಹನವನ್ನ ಅತಿವೇಗದಿಂದ ಓಡಿಸುತ್ತಾರೆ. ಇದರ ಪರಿಣಾಮ ರಸ್ತೆಯಲ್ಲೇ ಸಾವು-ನೋವು ಸಂಭವಿಸಿರುತ್ತೆ. ಈಗ ಅಂತಹದ್ದೇ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿದವರೆಲ್ಲ ಬೆಚ್ಚಿಬಿದ್ದಿದ್ದಾರೆ.

ಇದೇ ನೋಡಿ ಸಿಸಿಟಿವಿಯ ಭಯಂಕರ ದೃಶ್ಯ, ರಸ್ತೆಯಲ್ಲಿ ಸುಂಟರಗಾಳಿಯಂತೆ ನುಗ್ಗಿ ಬಂದ ಬುಲೆನೊ ಸ್ವಿಫ್ಟ್ ಕಾರು ಡಿವೈಡರ್‌ಗೆ ಗುದ್ದಿ, ಅಲ್ಲೇ 5-6 ಬಾರಿ ಪಲ್ಟಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಆ ರಸ್ತೆಯಲ್ಲಿ ಯಾವುದೇ ವಾಹನಗಳಾಗಲಿ, ಯಾರೂ ಪಾದಚಾರಿಗಳು ಓಡಾಡ್ತಿರಲಿಲ್ಲ. ಆದರೆ ಕಾರು ಪಲ್ಟಿಯಾಗಿ ಬಿದ್ದ ರೀತಿಗೆ, ಕಾರಿನೊಳಗೆ ಇದ್ದ ನಾಲ್ವರಿಗೂ ಗಂಭೀರ ರೂಪದ ಗಾಯಗಳಾಗಿವೆ.

ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ದೆಹಲಿ ಎನ್ಸಿಆರ್‌ ಪೊಲೀಸ್ ಪರಿಶೀಲನೆ ನಡೆಸಿ, ಈ ಕಾರಿನೊಳಗಿದ್ದ ನಾಲ್ವರೂ ಸಹ ಅಪ್ರಾಪ್ತರಾಗಿದ್ದು, ಈ ಬುಲೆನೋ ಕಾರನ್ನ 12ನೇ ತರಗತಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿ ಡ್ರೈವ್ ಮಾಡುತ್ತಿದ್ದ ಎಂದು ಹೇಳಿದ್ದಾರೆ. ಈ ನಾಲ್ವರು ಸ್ನೇಹಿತರಾಗಿದ್ದು, ಪಾಲಕರ ಗಮನಕ್ಕೆ ತರದೇ ಈ ಕಾರನ್ನ ಓಡಿಸುತ್ತಿದ್ದಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ.

ಸದ್ಯಕ್ಕೆ ಪಾಲಕರ ಗಮನಕ್ಕೆ ವಿಷಯವನ್ನ ತರಲಾಗಿದೆ, ಮಕ್ಕಳ ಚಲನವಲನ ಮೇಲೆ ನಿಗಾ ಇಡಲು ತಾಕೀತು ನೀಡಲಾಗಿದೆ. ಇನ್ನೂ ವಿದ್ಯಾರ್ಥಿಗಳಿಗೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಕೂಡದು ಎಂದು ಪೊಲೀಸರು ಕಟ್ಟುನಿಟ್ಟಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read