BIG NEWS: ನಟಿ ಮೇಲೆ ಗೆಳೆಯನಿಂದಲೇ ಅಮಾನುಷ ಹಲ್ಲೆ; ಫೋಟೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು…!

ಮಲಯಾಳಂ ನಟಿ ಅನಿಕಾ ವಿಕ್ರಮನ್ ಅವರ ಮೇಲೆ ಗೆಳೆಯನೇ ಅಮಾನುಷವಾಗಿ ಹಲ್ಲೆ ಮಾಡಿದ್ದು ಇದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

ಅನಿಕ ವಿಕ್ರಮನ್ ಜೊತೆ ಆಕೆಯ ಗೆಳೆಯ ಅನೂಪ್ ಪಿಳ್ಳೆ ಮೃಗದಂತೆ ವರ್ತಿಸಿದ್ದು, ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ನಟಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಇವರಿಬ್ಬರೂ ಪ್ರೀತಿಸುತ್ತಿದ್ದು, ಆರಂಭದಿಂದಲೂ ಆತ ನನ್ನೊಂದಿಗೆ ಇದೇ ವರ್ತನೆ ತೋರಿದ್ದ ಎಂದು ಅನಿಕಾ ಹೇಳಿದ್ದಾರೆ.

ಹೀಗಾಗಿ ನಾನು ಒಮ್ಮೆ ಚೆನ್ನೈ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದೆ. ಆ ಸಂದರ್ಭದಲ್ಲಿ ಅಳುತ್ತಾ ನನ್ನ ಕಾಲು ಹಿಡಿದುಕೊಂಡಿದ್ದ. ಇದರಿಂದಾಗಿ ಮನ ಕರಗಿ ನಾನು ಆತನನ್ನು ಕ್ಷಮಿಸಿದ್ದೆ. ಆದರೆ ನಾನು ಆಗ ತಪ್ಪು ಮಾಡಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ. ಈಗ ಎರಡನೇ ಬಾರಿಗೆ ಬೆಂಗಳೂರು ಪೊಲೀಸರಿಗೆ ನಟಿ ದೂರು ನೀಡಿದ್ದಾರೆ.

Malayalam actor Anicka Vikhraman shares pics of bruises, reveals shocking details of her abusive relationship | PINKVILLA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read