OMG : 25 ಕೆಜಿ ತೂಕದ ಚಿನ್ನದ ಸರಗಳನ್ನು ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಭಕ್ತರು |Video Viral

ಚಿನ್ನವು ಯಾವಾಗಲೂ ಭಾರತೀಯ ಸಂಸ್ಕೃತಿಯ ಮಹತ್ವದ ಭಾಗವಾಗಿದೆ. ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ..ಆದರೆ ಅದರ ಬೆಲೆ ಮಾತ್ರ ಗಗನಕ್ಕೇರಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಭಕ್ತರು 25 ಕೆಜಿ ತೂಕದ ಚಿನ್ನದ ಸರ ಧರಿಸಿ ಬಂದಿದ್ದಾರೆ. ಕುಟುಂಬವೊಂದು ಕುತ್ತಿಗೆಗೆ ಚಿನ್ನದ ಸರಗಳಿಂದ ಅಲಂಕಾರ ಮಾಡಿಕೊಂಡು ಬಂದಿದೆ. ಬರೋಬ್ಬರಿ 25 ಕೆಜಿ ಚಿನ್ನ ಧರಿಸಿರಬಹುದು ಎಂದು ಹೇಳಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಎಲ್ಲರ ಹುಬ್ಬೇರಿಸಿದೆ. ಭಾರಿ ಪ್ರಮಾಣದ ಚಿನ್ನ ಧರಿಸಿಪುಣೆಯ ಕುಟುಂಬವೊಂದು ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿತು
ಇಬ್ಬರು ಪುರುಷರು, ಮಹಿಳೆ ಮತ್ತು ಮಗು ಹೊಳೆಯುವ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಪುರುಷರು ತಮ್ಮ ಕುತ್ತಿಗೆಯನ್ನು ಮುಚ್ಚುವ ಚಿನ್ನದ ಸರಪಳಿಗಳೊಂದಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಅವರು ತಿರುಮಲದ ವೆಂಕಟೇಶ್ವರ ದೇವಾಲಯದ ಹೊರಗೆ ಬ್ರಾಂಡೆಡ್ ಸನ್ಗ್ಲಾಸ್ ಧರಿಸಿದ್ದಾರೆ.

https://twitter.com/i/status/1826849839058956514

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read