OMG : ಕೆಮ್ಮಿನ ಸಿರಪ್ ಬಾಟಲಿ ನುಂಗಿ ಒದ್ದಾಡಿದ ನಾಗರಹಾವು ; ವಿಡಿಯೋ ವೈರಲ್

ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿ ನಾಗರಹಾವು ಒದ್ದಾಡಿದ ಘಟನೆ ಭುವನೇಶ್ವರದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ನಾಗರಹಾವು ನುಂಗಿದ ಕೆಮ್ಮಿನ ಸಿರಪ್ ಬಾಟಲಿಯನ್ನು ತೆಗೆಯಲು ಹೆಣಗಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿವೆ.

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಾಡ (@susantananda3) ಅವರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡ ಪೋಸ್ಟ್ ಪ್ರಕಾರ, ಈ ಘಟನೆ ಭುವನೇಶ್ವರದಲ್ಲಿ ನಡೆದಿದೆ ಮತ್ತು ಹಾವು ಸಹಾಯವಾಣಿ ಸ್ವಯಂಸೇವಕರು ಸರೀಸೃಪಕ್ಕೆ ಸಹಾಯ ಮಾಡಿದ್ದಾರೆ.ನಾಗರಹಾವು ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಿದ್ದು ಮತ್ತು ಅದನ್ನು ಹೊರಗೆ ಹಾಕಲು ಹೆಣಗಾಡುತ್ತಿತ್ತು. ಸ್ವಯಂಸೇವಕರು ನಿಧಾನವಾಗಿ ಹಾವಿನ ಬಾಯಿಯಿಂದ ಬಾಟಲ್ ಹೊರ ತೆಗೆದು ಒಂದು ಜೀವವನ್ನು ಉಳಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://twitter.com/i/status/1808421554994241554

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read