ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

Get glowing skin in 3 weeks | 5 simple ways to use olive oil for ...

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ ಎಣ್ಣೆ ಎಂದೇ ಪರಿಗಣಿಸಲಾಗುತ್ತದೆ.

ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಒದಗಿಸುವುದರ ಜೊತೆಗೆ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಆಲಿವ್ ತೈಲದ ಅತ್ಯುತ್ತಮ ಚರ್ಮದ ಪ್ರಯೋಜನಗಳು ಹೀಗಿವೆ :

* ಆಲಿವ್ ಎಣ್ಣೆಯಿಂದ ಮುಖಕ್ಕೆ ಮಾಲಿಶ್‌ ಮಾಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ.

* ಚಳಿ, ಕೆಮ್ಮು, ದಮ್ಮು ಹೆಚ್ಚಿದ್ದಾಗ ಆಲಿವ್ ಎಣ್ಣೆಯಿಂದ ಎದೆಗೆ ಮಸಾಜ್‌ ಮಾಡಿದರೆ ಕಫ ಕಡಿಮೆಯಾಗುತ್ತದೆ.

* ಆಲಿವ್ ಎಣ್ಣೆ ಮತ್ತು ಜವೆಗೋಧಿ ಹಿಟ್ಟನ್ನು ಕಲಸಿ ಹೊಕ್ಕಳ ಮೇಲೆ ಲೇಪನ ಮಾಡಿದರೆ ಭೇದಿ ನಿಲ್ಲುತ್ತದೆ.

* ಆಲಿವ್ ಕಾಯಿಗಳನ್ನು ಸುಟ್ಟು ಬೂದಿ ಮಾಡಿ ಅದನ್ನು ನೀರಿನೊಂದಿಗೆ ಪೇಸ್ಟ್‌ ಮಾಡಿ. ಪೇಸ್ಟ್‌ ಅನ್ನು ತಲೆಗೆ ಹಚ್ಚಿ ಬೆಚ್ಚಗಿರುವ ನೀರಿನಿಂದ ತಲೆ ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ.

* ದೇಹದಲ್ಲಿ ಗಂಟುಗಳಿದ್ದು ನೋವಿದ್ದರೆ ಆಲಿವ್ ಎಣ್ಣೆಯನ್ನು ಗಂಟುಗಳ ಮೇಲೆ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

* ಹಳೆಯ ಗಾಯಗಳಿಗೆ ಆಲಿವ್ ಕಾಯಿಗಳನ್ನು ತೇದು ಹಚ್ಚಿದರೆ ಕಲೆ ಬೇಗ ಮಾಯುತ್ತದೆ.

* ಆಲಿವ್ ಎಲೆಗಳಿಂದ ಮೈ ಉಜ್ಜಿದರೆ ಬೆವರು ಮತ್ತು ದುರ್ಗಂಧ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read