ಶ್ರೇಷ್ಠ ಬಾಕ್ಸರ್​ ಮುಹಮ್ಮದ್ ಅಲಿಯ ಬೆರಗುಗೊಳಿಸುವ ಪಂಚಿಂಗ್​ ವಿಡಿಯೋ ವೈರಲ್​

ವಿಶ್ವದ ಶ್ರೇಷ್ಠ ಕ್ರೀಡಾ ವ್ಯಕ್ತಿಗಳಲ್ಲಿ ಒಬ್ಬರಾದ ಮುಹಮ್ಮದ್ ಅಲಿ ಅವರು ನಿಜವಾಗಿಯೂ ಅದ್ಭುತ ಬಾಕ್ಸರ್ ಮತ್ತು ವಿಶ್ವದ ಗಮನಾರ್ಹ ವ್ಯಕ್ತಿಯಾಗಿದ್ದರು. ಕ್ರೀಡೆ, ಜನಾಂಗ ಮತ್ತು ರಾಷ್ಟ್ರೀಯತೆಯನ್ನು ಮೀರಿ, ಅವರು ಕವಿ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿದ್ದರು.

2016ರಲ್ಲಿ ನಿಧನರಾದ ಇವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರ ಅಭಿಮಾನಿಗಳನ್ನು ಬೆರಗುಗೊಳಿಸಿದೆ. ವೈರಲ್ ವಿಡಿಯೋದಲ್ಲಿ ಅಲಿ ಬಾಕ್ಸಿಂಗ್ ರಿಂಗ್‌ನಲ್ಲಿ 10 ಸೆಕೆಂಡುಗಳಲ್ಲಿ 21 ಪಂಚ್‌ಗಳನ್ನು ಡಾಡ್ಜ್ ಮಾಡುವುದನ್ನು ಕಾಣಬಹುದು.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಫ್ಯಾಸಿನೇಟಿಂಗ್ ಹಂಚಿಕೊಂಡಿದ್ದಾರೆ ಮತ್ತು “ಮುಹಮ್ಮದ್ ಅಲಿ 10 ಸೆಕೆಂಡುಗಳಲ್ಲಿ 21 ಪಂಚ್‌ಗಳನ್ನು ತಪ್ಪಿಸುತ್ತಾರೆ (1977)” ಎಂದು ಶೀರ್ಷಿಕೆ ನೀಡಿದ್ದಾರೆ. ಕ್ಲಿಪ್ ಮೈಕೆಲ್ ಡೋಕ್ಸ್ ಮತ್ತು ಮುಹಮ್ಮದ್ ಅಲಿ ನಡುವಿನ 1977 ರ ಪ್ರದರ್ಶನ ಪಂದ್ಯವನ್ನು ತೋರಿಸುತ್ತದೆ.

ಅವರು 10 ಸೆಕೆಂಡ್‌ಗಳ ಅವಧಿಯಲ್ಲಿ 21 ಪಂಚ್‌ಗಳನ್ನು ತಪ್ಪಿಸುತ್ತಾರೆ ಮತ್ತು ಮೂಲೆಯಿಂದ ಹಿಂದೆ ಸರಿಯುತ್ತಾರೆ ಮತ್ತು ಡೋಕ್ಸ್‌ಗಳನ್ನು ಅಣಕಿಸಲು ಸುತ್ತಲೂ ನೃತ್ಯ ಮಾಡುತ್ತಾರೆ. ಈ ವಿಡಿಯೋ ಹಂಚಿಕೊಂಡಾಗಿನಿಂದ, ಆರು ಮಿಲಿಯನ್ ವೀಕ್ಷಣೆಗಳನ್ನು ಮತ್ತು 50 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿವೆ.

https://twitter.com/fasc1nate/status/1611499592788451329?ref_src=twsrc%5Etfw%7Ctwcamp%5Etweetembed%7Ctwterm%5E1611499592788451329%7Ctwgr%5E6ad4f8cd50b558c2bfb12b6e14af495aab5032ed%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fold-video-of-muhammad-ali-dodging-21-punches-in-10-seconds-goes-viral-3671986

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read