ಮೊಸಳೆ ಚಿತ್ರ ಸೆರೆಹಿಡಿಯಲು ಜೀವದ ಜೊತೆಗೆ ಚೆಲ್ಲಾಟ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆಗಳ ದಾಳಿ ಅದೆಷ್ಟು ಅಪಾಯಕಾರಿ ಎಂಬುದನ್ನು ನೀವು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಮೊಸಳೆಗಳಿರುವ ವಲಯದಲ್ಲಿ ಹೋಗಬೇಡಿ ಎಂದು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲ ಜನರು ನಿಯಮಗಳನ್ನೂ ಗಾಳಿಗೆ ತೂರಿ ಇಲ್ಲದ ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಾರೆ.

ಇಂಥದ್ದೇ ಒಂದು ಘಟನೆಯ ವಿಡಿಯೋ ವೈರಲ್ ಆಗಿದೆ. ಆದರೆ ಈ ಬಾರಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಎಚ್ಚರಿಕೆಯ ಸಂದೇಶ ರವಾನೆ ಮಾಡುವ ಈ ಕ್ಲಿಪ್‌ ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾಗಿದೆ.

ಮೊಸಳೆಯೊಂದರ ಸುತ್ತಲೂ ಚೇಷ್ಟೆ ಮಾಡುತ್ತಿರುವ ಹಿರಿಯ ಪ್ರಜೆಯೊಬ್ಬರು ಬಟ್ಟೆಯ ತುಂಡೊಂದನ್ನು ಬಳಸಿ ಹಳ್ಳದಲ್ಲಿರುವ ಮೊಸಳೆಯೊಂದರ ಕಣ್ಣು ಮುಚ್ಚಲು ಯತ್ನಿಸಿದ್ದಾರೆ. ಸಿಟ್ಟಿಗೆದ್ದ ಮೊಸಳೆ ದಾಳಿ ಮಾಡಲು ಮುಂದಾಗುತ್ತದೆ. ಆದರೆ ಅದರ ಕಣ್ಣುಗಳು ಮುಚ್ಚಿರುವ ಕಾರಣ ಯಾವುದೇ ಹಾನಿ ಮಾಡಲು ಮೊಸಳೆಗೆ ಆಗುವುದಿಲ್ಲ. ಬಳಿಕ ಮೊಸಳೆ ಸುಮ್ಮನಾದ ವೇಳೆ ಹಿಂದಿನಿಂದ ಅದರ ಚಿತ್ರ ಸೆರೆ ಹಿಡಿಯಲು ಇದೇ ವ್ಯಕ್ತಿ ಯತ್ನಿಸುತ್ತಾನೆ.

https://twitter.com/TWWLLTM/status/1636020497807990784?ref_src=twsrc%5Etfw%7Ctwcamp%5Etweetembed%7Ctwterm%5E1636020497807990784%7Ctwgr%5Eea2cfe3f9507ee08d031368ef92e7a04da4c2e88%7Ctwcon%5Es1_&ref_url=https%3A%2F%2Fwww.news18.com%2Fbuzz%2Fold-mans-attempt-to-capture-crocodile-goes-wrong-watch-scary-video-7323307.html

https://twitter.com/RobertM07023308/status/1636024096759881728?ref_src=twsrc%5Etfw%7Ctwcamp%5Etweetembed%7Ctwterm%5E1636024096759881728%7Ctwgr%5Eea2cfe3f9507ee08d031368ef92e7a04da4c2e88%7Ctwcon%5Es1_&ref_url=https%3A%2F%2Fwww.news18.com%2Fbuzz%2Fold-mans-attempt-to-capture-crocodile-goes-wrong-watch-scary-video-7323307.html

https://twitter.com/TWWLLTM/status/1636020497807990784?ref_src=twsrc%5Etfw%7Ctwcamp%5Etweetembed%7Ctwterm%5E1636183648352206851%7Ctwgr%5Eea2cfe3f9507ee08d031368ef92e7a04da4c2e88%7Ctwcon%5Es2_&ref_url=https%3A%2F%2Fwww.news18.com%2Fbuzz%2Fold-mans-attempt-to-capture-crocodile-goes-wrong-watch-scary-video-7323307.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read