ಮೈಸೂರು: ತಾನೇ ಸೇದಿ ಬಿಸಾಡಿದ ಬೀಡಿಯಿಂದ ಬೆಂಕಿ ತಗುಲಿ ವೃದ್ಧ ಸಜೀವ ದಹನವಾಗದ ಘಟನೆ ಮೈಸೂರಿನ ಮಂಡಿ ಮೊಹಲ್ಲಾದ ಸರ್ ಖಾಜಿ ರಸ್ತೆಯಲ್ಲಿ ನಡೆದಿದೆ.
ಗುಜರಿ ವ್ಯಾಪಾರಿ ಸಿದ್ದನಾಯ್ಕ(60) ಸಜೀವ ದಹನವಾಗಿದ್ದಾರೆ. ಇಡೀ ಮನೆಯ ಸುಟ್ಟು ಕರಕಲಾಗಿದೆ. ಬುಧವಾರ ಬೆಳಗ್ಗೆ ಸಿದ್ದನಾಯ್ಕ ಅವರ ಪತ್ನಿ ಸಿದ್ದಮ್ಮ ಕೂಲಿ ಕೆಲಸಕ್ಕೆ ತೆರಳಿದ್ದಾರೆ. ಮೊಮ್ಮಗಳು ಕಾಲೇಜಿಗೆ ಹೋಗಿದ್ದು ಮನೆಯಲ್ಲಿದ್ದ ಸಿದ್ದನಾಯ್ಕ ಬೀಡಿ ಸೇರಿದ ಬಳಿಕ ಮನೆಯಲ್ಲಿಯೇ ಎಸೆದಿದ್ದಾರೆ. ಹಳೆಯ ವಸ್ತುಗಳಿಗೆ ಬೀಡಿಯ ಬೆಂಕಿ ಕಿಡಿ ತಾಗಿದೆ. ಬೆಂಕಿ ಹೊತ್ತಿಕೊಂಡಿದ್ದು, ಹೊಗೆ ಆವರಿಸಿದ್ದರಿಂದ ಮನೆಯಿಂದ ಹೊರಬರಲು ಸಾಧ್ಯವಾಗದೆ ಸಿದ್ದನಾಯ್ಕ ಸಜೀವ ದಹನವಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.