ರಿಲೀಸ್ ಆಯ್ತು ‘ಒಲವೇ ಮಂದಾರ 2’ ಟ್ರೈಲರ್

2011 ರಲ್ಲಿ ತೆರೆಕಂಡಿದ್ದ ಜಯತೀರ್ಥ ನಿರ್ದೇಶನದ ಶ್ರೀಕಾಂತ್ ಅಭಿನಯದ ‘ಒಲವೇ ಮಂದಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಸಿನಿಪ್ರೇಕ್ಷಕರಲ್ಲಿ ಕಣ್ಣೀರು ತರಿಸುವಷ್ಟು ಗಮನ ಸೆಳೆದಿತ್ತು.

ಇದೀಗ ಹೊಸ ಪ್ರತಿಭೆಗಳಿಂದ ʼಒಲವೇ ಮಂದಾರ 2ʼ ಬರುತ್ತಿದೆ. ಈ ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಭರ್ಜರಿ ವೀಕ್ಷಣೆ ಕಂಡಿದೆ.

ಎಸ್ಆರ್ ಪಾಟೀಲ್ ನಿರ್ದೇಶನದ ಈ ಚಿತ್ರದಲ್ಲಿ ಸನತ್, ಪ್ರಜ್ಞಾ ಭಟ್, ಅನುಪ್ ಸತೀಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಸವ ಕಂಬೈನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಆನಂದ್ ಇಳಯರಾಜ ಛಾಯಾಗ್ರಾಹಣ, ಮಧು ಅವರ ಸಂಕಲನವಿದೆ. ಡಾಕ್ಟರ್ ಕಿರಣ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read