ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಿದ್ದೀರಾ ? ಹಾಗಾದ್ರೆ ನಿಮಗೆ ಮರಳಿ ಬರಬಹುದು ಚಾರ್ಜರ್‌ ಹಣ

ಒಂದು ವೇಳೆ ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ವೇಳೆ ಬ್ಯಾಟರಿ ಚಾರ್ಜರ್‌ಗೆ 9,000-19,000 ರೂ.ಗಳನ್ನು ವ್ಯಯಿಸಿದ್ದರೆ, ನಿಮಗೆ ಆ ದುಡ್ಡು ಮರಳಿ ಬರುವ ಸಾಧ್ಯತೆ ಇದೆ.

ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಕೊಡುವ ಸಬ್ಸಿಡಿಯನ್ನು ಪಡೆಯಬೇಕಾದಲ್ಲಿ ಓಲಾ ಎಲೆಕ್ಟ್ರಿಕ್ ಚಾರ್ಜರ್‌ನ ಬೆಲೆಯನ್ನು ಖರೀದಿದಾರರಿಗೆ ಹಿಂದಿರುಗಿಸಿದಲ್ಲಿ ಮಾತ್ರವೇ ಪಡೆಯಲು ಅರ್ಹವಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯ ತಿಳಿಸಿದ ಬಳಿಕ ಓಲಾ ಈ ನಡೆಗೆ ಮುಂದಾಗಿದೆ.

ಇದಕ್ಕೂ ಮುನ್ನ, ಚಾರ್ಜ್‌ರ್‌ಗಳನ್ನು ಸ್ಕೂಟರ್‌ ಬೆಲೆಯಲ್ಲಿ ಸೇರಿಸದೇ ಇದ್ದ ಕಾರಣ ಪ್ರತ್ಯೇಕವಾಗಿ ಮಾರಾಟ ಮಾಡಿತ್ತು ಓಲಾ. ಸ್ಮಾರ್ಟ್ ವೇಗದ ಚಾರ್ಜ್‌ರ್‌ಗಳಿಗೆ ತಲಾ 9,000-19,000 ರೂ.ಗಳಷ್ಟು ಚಾರ್ಜ್ ಮಾಡಿತ್ತು ಓಲಾ. ಅಂದಾಜುಗಳ ಪ್ರಕಾರ, ಒಂದು ವೇಳೆ ಚಾರ್ಜರ್‌ಗಳ ಮೇಲೆ ಓಲಾ ಎಲೆಕ್ಟ್ರಿಕ್ ಹೂಡಿಕೆ ಮಾಡಿದ್ದರೆ, 50-100 ಕೋಟಿ ರೂ.ಗಳ ಹೆಚ್ಚುವರಿ ಹೊರೆಯನ್ನು ಕಂಪನಿ ಹೊರಬೇಕಾಗಿತ್ತು.

ಆದರೆ ಫೇಮ್ 2 ಸ್ಕೀಂ ಪ್ರಕಾರ, ಚಾರ್ಜರ್‌ಗಳ್ನು ಪ್ರತ್ಯೇಕವಾಗಿ ಮಾರಾಟ ಮಾಡದೇ ಇದ್ದಲ್ಲಿ ಓಲಾ ಎಲೆಕ್ಟ್ರಿಕ್‌ಗೆ ತನ್ನ ಪಾಲಿನ ಸಬ್ಸಿಡಿ ಹಣ ಬರಲಿತ್ತು. ಒಂದು ವೇಳೆ ಚಾರ್ಜರ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದನ್ನು ಕಂಪನಿ ಮುಂದುವರೆಸಿದ್ದೇ ಆದಲ್ಲಿ ಸಬ್ಸಿಡಿ ಹಣವನ್ನು ಕೊಡುವುದಿಲ್ಲ ಎಂದು ಸರ್ಕಾರ ಕಟ್ಟುನಿಟ್ಟಾಗಿ ತಿಳಿಸಿದ ಬಳಿಕ ಓಲಾ ಇದೀಗ ಈ ಕೆಲಸಕ್ಕೆ ಮುಂದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read