ಬೆಂಗಳೂರಿನಲ್ಲಿ ಶೀಘ್ರದಲ್ಲೇ ಓಲಾ ಇ -ಬೈಕ್ ಸೇವೆ ಆರಂಭ

ನವದೆಹಲಿ: ಕ್ಯಾಬ್ ಸೇವೆ ಒದಗಿಸುವ ಓಲಾ ಕಂಪನಿ ದೆಹಲಿ ಮತ್ತು ಹೈದರಾಬಾದ್ ಗಳಲ್ಲಿ ಇ- ಬೈಕ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭಿಸಿದೆ.

ಕಂಪನಿಯು ಇ- ಬೈಕ್ ಸೇವೆಗಳ ಬೆಲೆಗಳನ್ನು ಕೂಡ ಪ್ರಕಟಿಸಿದ್ದು, ಶೀಘ್ರದಲ್ಲೇ ಬೆಂಗಳೂರಿನಲ್ಲಿಯೂ ಇ- ಬೈಕ್ ಸೇವೆ ಆರಂಭಿಸುವುದಾಗಿ ಹೇಳಲಾಗಿದೆ.

ಇ-ಬೈಕ್ ಸೇವೆ ದರ 5 ಕಿ.ಮೀ.ಗೆ 25 ರೂ., 10 ಕಿ.ಮೀ.ಗೆ 50 ರೂ., 15 ಕಿ.ಮೀ.ಗೆ 75 ರೂ.ನಿಂದ ಪ್ರಾರಂಭವಾಗಲಿವೆ. ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿಯೂ ಇ- ಬೈಕ್ ಸೇವೆ ಪ್ರಾರಂಭಿಸಲು ಓಲಾ ಯೋಜನೆ ರೂಪಿಸಿದೆ. ಬೆಂಗಳೂರಿನಲ್ಲಿ ಇ- ಬೈಕ್ ಸೇವೆ ನೀಡಲು 200 ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read