ಭುವನೇಶ್ವರ: ನೂತನವಾಗಿ ಚುನಾಯಿತರಾದ ಒಡಿಶಾ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಿಜೆಪಿ ಶಾಸಕ ಹಾಗೂ ಸಚಿವ ಲಕ್ಷ್ಮಣ್ ಬಾಗ್ ಅವರು ಪರಸ್ಪರ ಶುಭಾಶಯ ಕೋರುವ ಮೂಲಕ ಕ್ರೀಡಾ ಮನೋಭಾವದ ಪ್ರಾಮಾಣಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿಜೆಡಿ ಮುಖ್ಯಸ್ಥರು ಹಾದುಹೋಗುತ್ತಿರುವಾಗ ಬಾಗ್ ತನ್ನ ಆಸನದಿಂದ ಎದ್ದು ನಿಂತು, ಪಟ್ನಾಯಕ್ ಅವರನ್ನು ಸ್ವಾಗತಿಸುವುದನ್ನು ಮತ್ತು ಅವರ ಪರಿಚಯ ಮಾಡಿಕೊಳ್ಳುವುದನ್ನು ಕಾಣಬಹುದು. ಪ್ರತಿಯಾಗಿ ಪಟ್ನಾಯಕ್ ಅವರು ಬಾಗ್ ಕಡೆಗೆ ತಿರುಗಿ ಬಾಗ್ ಅವರ ಶುಭಾಶಯವನ್ನು ಸ್ವೀಕರಿಸಿ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ. “ಓಹ್ ನೀವು ನನ್ನನ್ನು ಸೋಲಿಸಿದ್ದೀರಾ?” ಎಂದು ಕೇಳಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂತಾಬಾಂಜಿ ವಿಧಾನಸಭಾ ಕ್ಷೇತ್ರದಿಂದ ನವೀನ್ ಪಟ್ನಾಯಕ್ ಅವರನ್ನು 16,000 ಮತಗಳಿಂದ ಬಾಗ್ ಸೋಲಿಸಿದ್ದಾರೆ. ಪಟ್ನಾಯಕ್ ಈ ಸ್ಥಾನದಿಂದ ಸೋತಿದ್ದರೂ, ಹಿಂಜಿಲಿ ಕ್ಷೇತ್ರದಿಂದ ಗೆದ್ದಿದ್ದಾರೆ.
ಮಂಗಳವಾರ ಆರಂಭವಾದ ವಿಶೇಷ ಅಧಿವೇಶನದಲ್ಲಿ ಒಡಿಶಾ ವಿಧಾನಸಭೆಯ ನೂತನ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಕಾಂತಬಾಂಜಿಯ ಶಾಸಕ ಮತ್ತು ಸಚಿವ ಲಕ್ಷ್ಮಣ್ ಬಾಗ್ ಅವರನ್ನು ನವೀನ್ ಪಟ್ನಾಯಕ್ ಭೇಟಿಯಾಗಿ, “ಓಹ್, ನೀವು ನನ್ನನ್ನು ಸೋಲಿಸಿದ್ದೀರಿ” ಎಂದು ಹೇಳುತ್ತಾರೆ. ಕ್ರೀಡಾ ಮನೋಭಾವದಿಂದ ಆತ್ಮೀಯವಾಗಿ ಮಾತನಾಡುತ್ತಾರೆ. ಈ ವಿಡಿಯೋ ವೀಕ್ಷಿಸಿದವರು ಪ್ರಶಂಸಿಸಿದ್ದಾರೆ.
Naveen Patnaik meets Laxman Bag, MLA & minister from Kantabanji and says, "Oh, you defeated me". You can't hate Naveen Patnaik. Man defies political enemy code. pic.twitter.com/ILRv6BjFEl
— Lord Immy Kant (Eastern Exile) (@KantInEast) June 18, 2024