ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು : ನಿರ್ಮಾಪಕ ಉಮಾಪತಿಗೆ ನಟ ದರ್ಶನ್ ಖಡಕ್ ತಿರುಗೇಟು

ಬೆಂಗಳೂರು : ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು..ಹೀಗಂತ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಪ್ರಸನ್ನ ಚಿತ್ರಮಂದಿರದಲ್ಲಿ ‘ಕಾಟೇರ’ ಚಿತ್ರದ 50ನೇ ದಿನದ ಸಂಭ್ರಮಾಚರಣೆ ನಡೆದಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ಉಮಾಪತಿಗೆ ಖಡಕ್ ತಿರುಗೇಟು ನೀಡಿದ್ದಾರೆ.

‘ಕಾಟೇರ’ ಕಥೆ ಹೇಳಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನು ಎಂದು ಉಮಾಪತಿ ಹೇಳಿದ್ದರು. ಇದಕ್ಕೆ ದರ್ಶನ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್ ….ಯಾಕಪ್ಪಾ..ಬಂದು ಬಂದು ನನ್ನ ಹತ್ತಿರನೇ ಗುಮ್ಮಿಸಿಕೊಳ್ತೀಯಾ..? “ಕೆಲವರು ಕಥೆ ನಾನು ಮಾಡಿಸಿದೆ. ಟೈಟಲ್ ನಾನು ಕೊಟ್ಟೆ ಅಂತ ಹೇಳ್ತಿದ್ದಾರೆ..? ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು, ಟೈಟಲ್ ಕೊಟ್ಟಿದ್ದೇ ನಾನು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.

“ನೀನು ಕಥೆ ಮಾಡಿಸಿದೆ ಅಲ್ವಾ? ಹಾಗಾದ್ರೆ ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ? ನಿನ್ನ ಜಡ್ಜ್ಮೆಂಟ್ ಅಷ್ಟು ಚೆನ್ನಾಗಿದೆ ಅಂದರೆ ನೀನು ಮಾಡಬಹುದಿತ್ತಲ್ಲ..ಸುಮ್ಮನೆ ಮಾತನಾಡಬಾರದು….ಆಧಾರ ಇಟ್ಟುಕೊಂಡು ಮಾತನಾಡಬೇಕು..ಎಂದು ನಟ ದರ್ಶನ್ ಹೇಳಿದರು. ಕಾಟೇರ’ ಹಿಟ್ ಆದ ಬಳಿಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಂದರ್ಶನಗಳಲ್ಲಿ ಮಾತನಾಡಿದ್ದರು. “ಕಾಟೇರ ಸಿನಿಮಾ ಚೆನ್ನಾಗಿ ಬಂದಿದೆ. ಕಥೆ ಬರೆಸಿದವನು ನಾನು. ತೆರೆಮೇಲೆ ಚೆನ್ನಾಗಿ ಬಂದಿದೆ. ನನಗೆ ಸಿನಿಮಾ ನೋಡಲು ಆಗಲಿಲ್ಲ ಎಂದಿದ್ದರು.

ದರ್ಶನ್ ಹೇಳಿಕೆಗೆ ಉಮಾಪತಿ ಪ್ರತಿಕ್ರಿಯೆ

‘’ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನು ನಾನಲ್ಲ, ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ, ನನಗೆ ಮಾಡೋಕೆ ಬಹಳ ಕೆಲಸ ಇದೆ, ನಾನು ಅವರ ಬಗ್ಗೆ ಮಾತನಾಡಲ್ಲ, ಭಗವಂತ ಇಂದು ನನಗೆ ಕೊಡ್ನಾನೆ. ನಾಳೆ ಕೊಡ್ತಾನೆ. ದರ್ಶನ್ ದೊಟ್ಟ ಮಟ್ಟಕ್ಕೆ ಬೆಳೆದಿದ್ದಾರೆ, ಅವರ ಬಗ್ಗೆ ನಾನು ಮಾತನಾಡಲ್ಲ. ಸಮಯ ಬಂದಾಗ ಮಾತನಾಡುತ್ತೇನೆ’’ ಎಂದು ಉಮಾಪತಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read