ಟಿಟಿಡಿ ಅಧಿಕಾರಿ, ಸ್ವಾಮೀಜಿ ವಿರುದ್ಧ ಆಕ್ಷೇಪಾರ್ಹ ವಿಡಿಯೋ ಪೋಸ್ಟ್: ತಿರುಪತಿ ಅರ್ಚಕರ ವಿರುದ್ಧ ಪ್ರಕರಣ ದಾಖಲು

ತಿರುಪತಿ: ಟಿಟಿಡಿ ಅಧಿಕಾರಿ ಮತ್ತು ಶ್ರೀಶೈಲದ ಅಹೋಬಿಲ ಮಠಾಧಿಪತಿ ವಿರುದ್ಧ ನಿಧಿ ಕಳ್ಳತನ ಆರೋಪ ಮಾಡಿ ಆಕ್ಷೇಪಾರ್ಹ ವಿಡಿಯೋ ಹರಿಬಿಟ್ಟ ತಿರುಮಲ ದೇವಸ್ಥಾನದ ಮುಖ್ಯ ಗೌರವ ಅರ್ಚಕ ರಮಣ ದೀಕ್ಷಿತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಟಿಟಿಡಿ ಅಧಿಕಾರಿ ಧರ್ಮಾರೆಡ್ಡಿ ಮತ್ತು ಶ್ರೀಶೈಲದ ಅಹೋಬಲ ಮಠಾಧೀಶರು ಶ್ರೀಶೈಲದ ಗುಹೆಯೊಂದರಿಂದ ನಿಧಿ ತೆಗೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ರಮಣ ದೀಕ್ಷಿತರು ವಿಡಿಯೋ ಪೋಸ್ಟ್ ಮಾಡಿದ್ದರು. ಇದಕ್ಕೆ ಅಹೋಬಿಲ ಮಠದ ಮುಖ್ಯಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಮಣ ದೀಕ್ಷಿತರು ಅರ್ಚಕರ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯರಲ್ಲ. ಧರ್ಮಾರೆಡ್ಡಿ ಆಗಾಗ ಮಠಕ್ಕೆ ಬಂದು ನಿಧಿ ತೆಗೆಯಲು ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ಒಂದು ಸಲ ಕೂಡ ಧರ್ಮಾರೆಡ್ಡಿ ಅಹೋಬಿಲ ಮಠಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read