ಒಡಿಶಾ ರೈಲು ದುರಂತ: ಸ್ಥಳೀಯರ ನೆರವಿನಿಂದ ಪಾರಾಗಿ ಬಂದ ಕೇರಳದ ಕುಟುಂಬ

ಶುಕ್ರವಾರ ಒಡಿಶಾದ ಬಾಲಸೋರ್‌ನಲ್ಲಿ ಅಫಘಾತಕ್ಕೀಡಾದ ಕೊರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಕೇರಳ ಮೂಲದ ಕುಟುಂಬವೊಂದು ಅದೃಷ್ಟವಶಾತ್‌‌ ಯಾವುದೇ ಗಾಯಗಳಾಗದೇ ಪಾರಾಗಿದೆ. 300ಕ್ಕು ಹೆಚ್ಚು ಜನರನ್ನು ಕೊಂದು 1000ಕ್ಕೂ ಹೆಚ್ಚಿನ ಮಂದಿಯನ್ನು ಗಾಯಗೊಳಿಸಿದ ಘಟನೆಯಲ್ಲಿ, ಕೇರಳದ ಪಯ್ಯನೂರ್‌ ಜಿಲ್ಲೆಯ ಸೀಮೀರಾ ಹಾಗೂ ಆಕೆಯ ಪತಿ ಮತ್ತು ಮಗ ಸಹ ಇದ್ದರು.

ಅಫಘಾತದಲ್ಲಿ ಸಿಲುಕಿ ಪ್ರಾಣಾಪಾಯಕ್ಕೀಡಾದ ನೂರಾರು ಮಂದಿಯ ಚೀರಾಟವನ್ನು ಕೇಳಿಸಿಕೊಂಡು ಗಾಬರಿಗೊಂಡ ಸೀಮಿರಾ, ತಮ್ಮ ಮುಂದೆ ಜರುಗಿದ ಈ ಘೋರ ಅನಾಹುತವನ್ನು ಅಸಹಾಯಕರಾಗಿ ನೋಡಬೇಕಾಗಿ ಬಂದಿತ್ತು.

ಶುಕ್ರವಾರ ಸಂಜೆ ಜರುಗಿದ ಈ ಅನಾಹುತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಘಟನೆಯಲ್ಲಿ ಮೃತಪಟ್ಟ ಮಂದಿಗೆ ಇಡೀ ಜಗತ್ತೇ ಕಂಬನಿ ಮಿಡಿದಿದೆ. ಅಫಘಾತದ ಸ್ಥಳಕ್ಕೆ ಕೂಡಲೇ ಧಾವಿಸಿದ ಸ್ಥಳೀಯರು ಮೊದಲ ನಿಮಿಷದಿಂದಲೇ ಹಿಂದೂ ಮುಂದೂ ನೋಡದೇ ರೈಲುಗಳ ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆಗೆ ಧಾವಿಸಿದರು.

ಮುನ್ಸಿಪಲ್ ಕೌನ್ಸಿಲರ್‌ ಸಹ ಆಗಿರುವ ಸೀಮೀರಾ ಕುಟುಂಬ ಅಫಘಾತಗೊಂಡ ರೈಲಿನಿಂದ ಕೆಳಗಿಳಿದಿದ್ದಾರೆ. ಈ ವೇಳೆ ಕೈಯಲ್ಲಿ ಟಾರ್ಚ್‌ಗಳನ್ನು ಹಿಡಿದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಸೀಮೀರಾ ಕುಟುಂಬಕ್ಕೆ ನೆರವಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read