ಭುವನೇಶ್ವರ: ಭುವನೇಶ್ವರ ಮಹಾನಗರ ಪಾಲಿಕೆ(ಬಿಎಂಸಿ) ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಸೋಮವಾರ ಹಾಡಹಗಲೇ ಪುರುಷರ ಗುಂಪೊಂದು ಹಲ್ಲೆ ನಡೆಸಿದೆ ಎಂಬ ಆರೋಪದ ಮೇಲೆ ಮೂವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಈ ನಾಟಕೀಯ ಘಟನೆಯ ವೀಡಿಯೊ ವೈರಲ್ ಆದ ನಂತರ ಈ ಘಟನೆ ರಾಜಕೀಯ ವಿವಾದಕ್ಕೆ ಕಾರಣವಾಯಿತು, ಬಿಜು ಜನತಾದಳ(ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಹೇಳಿಕೊಂಡ ನಂತರ ಆಕ್ರೋಶಕ್ಕೆ ಕಾರಣವಾಗಿದೆ.
ಖಾರ್ವೆಲ್ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ ರೌತ್, ರಶ್ಮಿ ಮಹಾಪಾತ್ರ ಮತ್ತು ದೇಬಾಶಿಸ್ ಪ್ರಧಾನ್ ಎಂಬ ಮೂವರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಜಗಮೋಹನ್ ಮೀನಾ ತಿಳಿಸಿದ್ದಾರೆ.
ಸೋಮವಾರ ಭುವನೇಶ್ವರ ಮಹಾನಗರ ಪಾಲಿಕೆ(ಬಿಎಂಸಿ) ಕಚೇರಿಯಲ್ಲಿ ದೂರು ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಪುರುಷರ ಗುಂಪೊಂದು ಹಲ್ಲೆ ನಡೆಸಿದ ನಂತರ ನಾಟಕೀಯ ವಾತಾವರಣ ನಿರ್ಮಾಣವಾಯಿತು. ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಪುರುಷರು ಸಾಹೂ ಅವರನ್ನು ಬಲವಂತವಾಗಿ ಕಚೇರಿಯಿಂದ ಹೊರಗೆ ಎಳೆದುಕೊಂಡು ಹೋಗಿ, ಒದ್ದು, ಹೊಡೆದಿದ್ದಾರೆ, ಅವರ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ.
ಈ ಹಲ್ಲೆ ಪ್ರಕರಣ ಒಡಿಶಾದಾದ್ಯಂತ ವ್ಯಾಪಕ ಪ್ರತಿಭಟನೆಗಳು ಮತ್ತು ತೀಕ್ಷ್ಣವಾದ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಘಟನೆಗೆ ಪ್ರತಿಕ್ರಿಯೆಯಾಗಿ, ವಿರೋಧ ಪಕ್ಷದ ಬಿಜು ಜನತಾದಳ (ಬಿಜೆಡಿ) ಮತ್ತು ಬಿಎಂಸಿ ಸಿಬ್ಬಂದಿ ರಾಜಧಾನಿಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ಜನಪಥ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು.
ದಾಳಿಯನ್ನು ವಿರೋಧಿಸಿ ಮಂಗಳವಾರದಿಂದ “ಸಾಮೂಹಿಕ ರಜೆ” ತೆಗೆದುಕೊಳ್ಳುವ ನಿರ್ಧಾರವನ್ನು ಒಡಿಶಾ ಆಡಳಿತ ಸೇವಾ ಸಂಘವು ಘೋಷಿಸಿತ್ತು. ಆದಾಗ್ಯೂ, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರೊಂದಿಗಿನ ಸಭೆಯ ನಂತರ ಈ ಕ್ರಮವನ್ನು ಸ್ಥಗಿತಗೊಳಿಸಲಾಯಿತು. ಚರ್ಚೆಯ ಸಮಯದಲ್ಲಿ, ಹಲ್ಲೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ, ಅವರ ರಾಜಕೀಯ ಪ್ರಭಾವವನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಂಘಕ್ಕೆ ಭರವಸೆ ನೀಡಿದರು.
I am utterly shocked seeing this video.
— Naveen Patnaik (@Naveen_Odisha) June 30, 2025
Today, Shri Ratnakar Sahoo, OAS Additional Commissioner, BMC, a senior officer of the rank of Additional Secretary was dragged from his office and brutally kicked and assaulted in front of a BJP Corporator, allegedly linked to a defeated… pic.twitter.com/yf7M3dLt9C