BIG NEWS : ‘ಹೈಕೋರ್ಟ್’ ಕಲಾಪದ ಲೈವ್ ಸ್ಟ್ರೀಮಿಂಗ್ ವೇಳೆ ‘ಅಶ್ಲೀಲ ದೃಶ್ಯ’ ಪ್ರಸಾರ

ಬೆಂಗಳೂರು : ಹೈಕೋರ್ಟ್ ಕಲಾಪದ ಲೈವ್ ಸ್ಟ್ರೀಮಿಂಗ್ ವೇಳೆ ಅಶ್ಲೀಲ ದೃಶ್ಯ ಪ್ರಸಾರವಾದ ಘಟನೆ ನಡೆದಿದ್ದು, ಕೆಲಕ್ಷಣ ಎಲ್ಲರೂ ಮುಜುಗರಕ್ಕೊಳಗಾದರು.

ಹೈಕೋರ್ಟ್ ನಡೆಯುವ ಕಲಾಪಗಳನ್ನು ವೀಕ್ಷಿಸಲು ಸಾರ್ವಜನಿಕರಿಗೋಸ್ಕರ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಹ್ಯಾಕರ್ಸ್ ಗಳು ಇದನ್ನು ಹ್ಯಾಕ್ ಮಾಡಿ ಅಶ್ಲೀಲ ದೃಶ್ಯಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಕೆಲವು ಕೋರ್ಟ್ ಹಾಲ್ ‍ಗಳ ವಿಡಿಯೋ ಕಾನ್ಪರೆನ್ಸ್ ಹ್ಯಾಕ್ ಆಗಿದೆ, ಸದ್ಯಕ್ಕೆ ವಿಡಿಯೋ ಕಾನ್ಸ್ ರೆನ್ಸ್ ಸ್ಥಗಿತಮಾಡಲಾಗಿದೆ  ಎಂದು ಸಿಜೆ ಪ್ರಸನ್ನ ಬಿ ವರಾಳೆ ಮಾಹಿತಿ ನೀಡಿದ್ದಾರೆ.ಹ್ಯಾಕ್ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಹೈಕೋರ್ಟ್ ಸಿಬ್ಬಂದಿ ಕೇಂದ್ರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರನ್ವಯ ಎಫ್ ಐ ಆರ್ ದಾಖಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read