ಮಂಗಳೂರು : ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರೊ. ಪುರುಷೋತ್ತಮ್ ಬಿಳಿಮಲೆ ವಿರುದ್ಧ ದೂರು ದಾಖಲಾಗಿದೆ.
ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಯಕ್ಷಗಾನ ಕಲಾವಿದರೊಬ್ಬರು ದೂರು ದಾಖಲಿಸಿದ್ದಾರೆ.
ಯಕ್ಷಗಾನ ಕಲಾವಿದರ ಬಗ್ಗೆ ಬಿಳಿಮಲೆ ಆಕ್ಷೇಪಾರ್ಹ ಪದ ಪ್ರಯೋಗ ಮಾಡಿದ್ದಲ್ಲದೇ ಕಲಾವಿದರನ್ನ ತೇಜೋವಧೆ ಮಾಡಿದ್ದಾರೆ.ಇದು ಕಲಾವಿದರ ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಲಾವಿದ ರವಿ ಅಲೆವೂರಾಯ ದೂರು ನೀಡಿದ್ದಾರೆ.
ಏನಿದು ಹೇಳಿಕೆ .?
‘ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು’ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.ಮೈಸೂರಿನ ಮಾಸನಗಂಗೋತ್ರಿ ಪ್ರಸಾರಂಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ.
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ನಾವು ಸತ್ಯವನ್ನ ಹೇಳಲು ಹಿಂಜರಿಯಬಾರದು, ಯಕ್ಷಗಾನ ಕಲಾವಿದರು ಮೇಳಕ್ಕೆ ಅಂತ 6-7 ತಿಂಗಳು ತಿರುಗುತ್ತಲೇ ಇರುತ್ತಾರೆ. ಅವರಿಗೆ ಯಾರೂ ಕೂಡ ಹೆಣ್ಣು ಕೊಡುತ್ತಿರಲಿಲ್ಲ. ಸ್ತ್ರೀ ವೇಷಾಧಾರಿಗಳು ಒತ್ತಡದಲ್ಲಿರುತ್ತಿದ್ದರು, ಸ್ತ್ರೀ ವೇಷಾಧಾರಿ ಒಂದು ವೇಳೆ ಸಲಿಂಗಕಾಮ ನಿರಾಕರಿಸಿದ್ರೆ ಭಾಗವತರು ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಹೀಗೆ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಇಂತಹ ಒತ್ತಡದಲ್ಲಿ ಕಲಾವಿದರು ಬದುಕುತ್ತಿದ್ದರು ಎಂದು ಅವರು ಹೇಳಿದ್ದಾರೆ.
