ಪೌಷ್ಟಿಕಾಂಶಗಳ ಆಗರ ʼದಾಳಿಂಬೆʼ

ದಾಳಿಂಬೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲ. ಕಫನಾಶಕ ಹಾಗೂ ಪಿತ್ತ ಶಮನಕಾರಿಯಾಗಿದೆ. ಪೌಷ್ಟಿಕಾಂಶಗಳ ಆಗರವಾಗಿರುವ ದಾಳಿಂಬೆ ಹಣ್ಣಿನ ಕೆಲವೊಂದು ಪ್ರಯೋಜನಗಳು ಇಲ್ಲಿವೆ.

ನೆನಪಿನ ಶಕ್ತಿ ಹಾಗೂ ಮೂತ್ರಪಿಂಡ ಆರೋಗ್ಯ : ದಾಳಿಂಬೆಯ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಚುರುಕಾಗುತ್ತದಲ್ಲದೆ, ಮೂತ್ರಪಿಂಡದ ಸಮಸ್ಯೆಗಳು ದೂರವಾಗುತ್ತವೆ.

ಹೃದಯ ಆರೋಗ್ಯ : ಅರ್ಧ ಕಪ್ ದಾಳಿಂಬೆ ಹಣ್ಣಿನ ಕಾಳುಗಳಿಗೆ ಚಿಟಿಕೆ ಉಪ್ಪು, ಕಾಲು ಚಮಚ ಕರಿಮೆಣಸಿನ ಕಾಳಿನ ಪುಡಿ ಬೆರೆಸಿ ಸೇವಿಸುವುದರಿಂದ ಆಯಾಸ ಪರಿಹಾರವಾಗುವುದರೊಂದಿಗೆ ಹೃದಯ ಬಲವರ್ಧಕವಾಗುವುದು.

ರೋಗ ನಿರೋಧಕ ಶಕ್ತಿ : 2 ವಾರಗಳ ಕಾಲ ನಿಯಮಿತವಾಗಿ ದಾಳಿಂಬೆ ರಸದ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ದಾಳಿಂಬೆ ಹಣ್ಣಿನ ಕಾಳುಗಳನ್ನು ಕೋಸಂಬರಿ ಹಾಗೂ ಸಾಲಡ್ ಗಳ ಜೊತೆ ಬೆರೆಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read