ಆಸ್ಪತ್ರೆಯಲ್ಲಿ ‘ಭೂಕಂಪ’ ಆದರೂ ಹೆದರದೇ ನವಜಾತ ಶಿಶುಗಳನ್ನು ರಕ್ಷಿಸಿದ ನರ್ಸ್’ಗಳು : ಹೃದಯಸ್ಪರ್ಶಿ ವೀಡಿಯೋ ವೈರಲ್ |WATCH VIDEO

ಅಸ್ಸಾಂನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದಾಗ ನಡೆದ ಘಟನೆಯೊಂದು ವೈರಲ್ ಆಗಿದೆ. ಭೂಕಂಪ ಆದರೂ ಹೆದರದೇ ನವಜಾತ ಶಿಶುಗಳನ್ನು ರಕ್ಷಿಸಿದ ನರ್ಸ್ ಗಳು ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾನುವಾರ ಸಂಜೆ ಈಶಾನ್ಯ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ವೈರಲ್ ಆಗಿರುವ ವಿಡಿಯೋ ರಾಜ್ಯದ ನಾಗಾಂವ್ ಜಿಲ್ಲೆಯ ಖಾಸಗಿ ಆಸ್ಪತ್ರೆಯದ್ದಾಗಿದೆ.

ನರ್ಸ್ಗಳ ಈ ಧೈರ್ಯಶಾಲಿ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಂಪನ ಮತ್ತು ವಿದ್ಯುತ್ ಏರಿಳಿತದ ಸಮಯದಲ್ಲಿ ಅವರು ಶಿಶುಗಳನ್ನು ರಕ್ಷಿಸುತ್ತಿರುವುದನ್ನು ಕಾಣಬಹುದು. ಸಂಜೆ 4.40 ರ ಸುಮಾರಿಗೆ ಸೆರೆಹಿಡಿಯಲಾದ ಈ ವೀಡಿಯೊ ಖಾಸಗಿ ನರ್ಸಿಂಗ್ ಹೋಂ- ಆದಿತ್ಯ ನರ್ಸಿಂಗ್ ಹೋಂನದ್ದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read