ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಬಾಘಿ- 4 ಚಿತ್ರವು ಸೆನ್ಸಾರ್ ಪ್ರಕ್ರಿಯೆಯನ್ನು ಮುಗಿಸಿದ್ದು, ಬಿಡುಗಡೆಗೆ ಸಜ್ಜಾಗಿದೆ.ನಾಳೆ ( ಸೆ.5) ಸಿನಿಮಾ ತೆರೆಗೆ ಬರಲಿದೆ.
ಎ ಹರ್ಷ ಅವರ ಬಾಲಿವುಡ್ ಚೊಚ್ಚಲ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಸಿನಿಮಾ ಬಾಘಿ- 4 ನಲ್ಲಿ 23 ದೃಶ್ಯಕ್ಕೆ ಕಡಿತ ಬಿದ್ದಿದೆ.. ಹಾಗೂ ಬಹು ಆಡಿಯೋ ಬದಲಾವಣೆಗಳಿಗೆ ಒಳಗಾಗಿದೆ. ಈ ಪ್ರಕ್ರಿಯೆ ನಂತರ ನಂತರ CBFC ಯಿಂದ ‘A’ ಪ್ರಮಾಣಪತ್ರವನ್ನು ನೀಡಲಾಗಿದೆ.
ಸೆನ್ಸಾರ್ ಮಂಡಳಿಯು ಹಲವಾರು ಭಾಗಗಳನ್ನು ಆಕ್ಷೇಪಾರ್ಹವೆಂದು ಕಂಡುಕೊಂಡಿತು. ನಗ್ನತೆ ಒಳಗೊಂಡ ಒಂದು ದೃಶ್ಯವನ್ನ ಕಟ್ ಮಾಡಲಾಗಿದೆ. ಶವಪೆಟ್ಟಿಗೆಯ ಮೇಲೆ ನಿಂತಿರುವ ಪಾತ್ರವೊಂದನ್ನು ತೋರಿಸುವ ದೃಶ್ಯವನ್ನು ಸಂಪೂರ್ಣವಾಗಿ ಅಳಿಸಲು ಆದೇಶಿಸಲಾಯಿತು.
ತೀರಾ ಅಸಭ್ಯವೆಂದು ಪರಿಗಣಿಸಲಾದ ಕೆಲವು ಸಂಭಾಷಣೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು CBFC ಒತ್ತಾಯಿಸಿತು: “ಭಾಯ್ ತುಜೆ ಕಾಂಡೋಮ್ ಮೇ ಹಿ ರೆಹನಾ ಚಾಹಿಯೇ ಥಾ” ಎಂಬ ಸಾಲನ್ನು ಬದಲಾಯಿಸಲಾಯಿತು, “ಕಾಂಡೋಮ್” ಎಂಬ ಪದವನ್ನು ಮ್ಯೂಟ್ ಮಾಡಲಾಯಿತು. “ಫಿಂಗರಿಂಗ್” ಎಂಬ ಪದವನ್ನು ಹೆಚ್ಚು ಸ್ವೀಕಾರಾರ್ಹ ಸಮಾನಾರ್ಥಕ ಪದದೊಂದಿಗೆ ಬದಲಾಯಿಸಲಾಯಿತು.