114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್

ಜಲಂಧರ್: ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಅವರ ಜೀವವನ್ನು ಬಲಿತೆಗೆದುಕೊಂಡ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಶಂಕಿತ ಚಾಲಕನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಅಮೃತಪಾಲ್ ಧಿಲ್ಲನ್ ಎಂದು ಗುರುತಿಸಲಾಗಿದೆ. ಜಲಂಧರ್ ಜಿಲ್ಲೆಯ ಹಳ್ಳಿಯಲ್ಲಿರುವ ಅವರ ಮನೆಯಿಂದ ಮಂಗಳವಾರ ರಾತ್ರಿ ಅವರನ್ನು ಬಂಧಿಸಲಾಯಿತು.

114 ವರ್ಷದ ದಂತಕಥೆ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಒಳಗೊಂಡ ಹೈ ಪ್ರೊಫೈಲ್ ಹಿಟ್ ಅಂಡ್ ರನ್ ಪ್ರಕರಣವನ್ನು ಜಲಂಧರ್ ಗ್ರಾಮೀಣ ಪೊಲೀಸರು 30 ಗಂಟೆಗಳ ಒಳಗೆ ಭೇದಿಸಿದ್ದಾರೆ.

ಮಂಗಳವಾರ ತಡರಾತ್ರಿ ಪೊಲೀಸರು 30 ವರ್ಷದ ಅನಿವಾಸಿ ಭಾರತೀಯ ಅಮೃತ್‌ಪಾಲ್ ಸಿಂಗ್ ಧಿಲ್ಲೋನ್ ಅವರನ್ನು ಬಂಧಿಸಿರುವುದಾಗಿ ದೃಢಪಡಿಸಿದ್ದಾರೆ. ಘಟನೆಯಲ್ಲಿ ಬಳಸಲಾದ ಟೊಯೋಟಾ ಫಾರ್ಚೂನರ್ ಎಸ್‌ಯುವಿಯನ್ನು ಸಹ ವಶಪಡಿಸಿಕೊಂಡಿದ್ದಾರೆ.

ಭೋಗ್‌ಪುರದಲ್ಲಿ ವಾಹನ ಸಂಖ್ಯೆಯ ಮೂಲಕ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ಎಸ್‌ಎಸ್‌ಪಿ ಹರ್ವಿಂದರ್ ಸಿಂಗ್ ವಿರ್ಕ್ ರಚಿಸಿದ ವಿಶೇಷ ತಂಡವು ಸಿದ್ಧಪಡಿಸಿದ ಶಂಕಿತ ವಾಹನಗಳ ಪಟ್ಟಿಯ ಮೂಲಕ ವಾಹನವನ್ನು ಪತ್ತೆಹಚ್ಚಲಾಗಿದೆ.

ಮಂಗಳವಾರ ತಡರಾತ್ರಿ ಪೊಲೀಸರು ಅಮೃತ್‌ಪಾಲ್ ಸಿಂಗ್ ಅವರನ್ನು ಭೋಗ್‌ಪುರ ಪೊಲೀಸ್ ಠಾಣೆಗೆ ಕರೆತಂದರು, ಅಲ್ಲಿ ಅವರನ್ನು ವ್ಯಾಪಕ ವಿಚಾರಣೆಗೆ ಒಳಪಡಿಸಲಾಯಿತು. ಅವರು ಜಲಂಧರ್‌ನ ಕರ್ತಾರ್‌ಪುರದ ದಾಸುಪುರ ಗ್ರಾಮದ ನಿವಾಸಿಯಾಗಿದ್ದು, ಪೊಲೀಸ್ ಕಸ್ಟಡಿಗೆ ಕೋರಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಪ್ರಾಥಮಿಕ ವಿಚಾರಣೆಯಲ್ಲಿ, ಅಮೃತ್‌ಪಾಲ್ ಅಪರಾಧವನ್ನು ಒಪ್ಪಿಕೊಂಡರು. ಬಯಾಸ್ ಗ್ರಾಮವನ್ನು ಸಮೀಪಿಸುತ್ತಿದ್ದಂತೆ, ಒಬ್ಬ ವೃದ್ಧ ವ್ಯಕ್ತಿ ಅವರ ವಾಹನದ ಮುಂದೆ ಬಂದರು. ಆ ರಾತ್ರಿ ನಡೆದ ಘಟನೆ ಸುದ್ದಿಯಾಗುವವರೆಗೂ ಮೃತರು ಫೌಜಾ ಸಿಂಗ್ ಎಂದು ತನಗೆ ತಿಳಿದಿರಲಿಲ್ಲ ಎಂದು ಅಮೃತಪಾಲ್ ಹೇಳಿದ್ದಾರೆ.

ಇದೀಗ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಹಿಟ್ ಅಂಡ್ ರನ್ ಸಾವಿನ ಆರೋಪಿ ಅನಿವಾಸಿ ಭಾರತೀಯ ಅಮೃತ್ ಪಾಲ್ ಬಂಧಿಸಿ ಫಾರ್ಚೂನರ್ ಕೂಡ ವಶಕ್ಕೆ ಪಡೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read