ಬೆಂಗಳೂರು : ನರೇಗಾ ಯೋಜನೆಯಡಿ 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ ಹಾಗೂ ₹3,532 ಕೋಟಿ ಹಣ ಜಮಾ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಆರ್ಥಿಕತೆಗೆ ಬಲ ನೀಡಿದ ನರೇಗಾ ಯೋಜನೆಯನ್ನು ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದೆ.ಸಮುದಾಯಿಕ ಕಾಮಗಾರಿಗಳಿಂದ ಗ್ರಾಮಗಳ ಅಭಿವೃದ್ಧಿಯಲ್ಲದೆ, ವೈಯಕ್ತಿಕ ಕಾಮಗಾರಿಗಳಿಂದ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ, ರೈತರ ಕೃಷಿ ಚಟವಟಿಕೆಗಳಿಗೆ ಬೆಂಬಲವಾಗಿದೆ.ನರೇಗಾ ಯೋಜನೆಯಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿದ್ದು ಈ ಯೋಜನೆಯ ಯಶಸ್ಸಿನ ಪ್ರತಿಬಿಂಬ. ಕೂಲಿ ಮೊತ್ತವನ್ನು ಏರಿಸಿ, 24.75 ಕೋಟಿ ಮಾನವ ದಿನಗಳನ್ನು ಸೃಜಿಸಿ ಸುಮಾರು 55 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗಿದೆ. ₹3,532 ಕೋಟಿ ಹಣ ಗ್ರಾಮೀಣ ಜನರ ಕೈ ಸೇರಿದೆ.“ದುಡಿಯುವ ಕೈಗಳಿಗೆ ಉದ್ಯೋಗ, ಗ್ರಾಮಗಳ ವಿಕಾಸಕ್ಕೆ ನರೇಗಾ“ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮೀಣ ಆರ್ಥಿಕತೆಗೆ ಬಲ ನೀಡಿದ ನರೇಗಾ ಯೋಜನೆಯನ್ನು ನಮ್ಮ ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 26, 2025
ಸಮುದಾಯಿಕ ಕಾಮಗಾರಿಗಳಿಂದ ಗ್ರಾಮಗಳ ಅಭಿವೃದ್ಧಿಯಲ್ಲದೆ, ವೈಯಕ್ತಿಕ ಕಾಮಗಾರಿಗಳಿಂದ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ, ರೈತರ ಕೃಷಿ ಚಟವಟಿಕೆಗಳಿಗೆ ಬೆಂಬಲವಾಗಿದೆ.
ನರೇಗಾ ಯೋಜನೆಯಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿದ್ದು ಈ… pic.twitter.com/6KXqp5sBhK