ಶುಭ ಸುದ್ದಿ: ಹೋರಾಟಕ್ಕೆ ಮಣಿದ ಸರ್ಕಾರ; ಹಳೆ ಪಿಂಚಣಿಗೆ ಸೇರಲು ಸರ್ಕಾರಿ ನೌಕರರಿಗೆ ಅವಕಾಶ

ನವದೆಹಲಿ: ಹೊಸ ಪಿಂಚಣಿಯಿಂದ ಹಳೆಯ ಪಿಂಚಣಿಗೆ ಶಿಫ್ಟ್ ಆಗಲು ಕೆಲವು ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ.

ಕೆಲವು ಕೇಂದ್ರ ಸರ್ಕಾರಿ ನೌಕರರಿಗಷ್ಟೇ ಈ ನಿಯಮ ಅನ್ವಯವಾಗುತ್ತದೆ. 2002 ಡಿಸೆಂಬರ್ 22ರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಕೇಂದ್ರ ಸರ್ಕಾರ ಅಧಿ ಸೂಚನೆ ಹೊರಡಿಸಿದ್ದರೂ, 2004ರ ಜನವರಿ 1ರಿಂದ ಜಾರಿಗೆ ಬಂದಿದೆ. 2002ರ ಡಿಸೆಂಬರ್ 22ರ ದಿನಾಂಕಕ್ಕೆ ಮೊದಲು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಒಪಿಎಸ್‌ ಗೆ ಸೇರಿಕೊಳ್ಳಲು ಅವಕಾಶ ನೀಡಲಾಗಿದೆ. ಆಗಸ್ಟ್ 31ರವರೆಗೆ ಸಮಯ ನಿಗದಿಪಡಿಸಲಾಗಿದೆ.

ಆಡಳಿತಾತ್ಮಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ 2004ರಲ್ಲಿ ಸೇವೆಗೆ ಸೇರಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಮತ್ತು ಇತರೆ ಕೇಂದ್ರ ಸರ್ಕಾರಿ ನೌಕರರಿಗೆ ಈ ಆದೇಶ ಅನ್ವಯವಾಗುತ್ತದೆ.

ಜನವರಿ 31ರವರೆಗೆ 23,65, 693 ಕೇಂದ್ರ ಸರ್ಕಾರಿ ನೌಕರರು, 60,32,768 ರಾಜ್ಯ ಸರ್ಕಾರಿ ನೌಕರರು ಎನ್‌ಪಿಎಸ್ ಅಡಿಯಲ್ಲಿ ದಾಖಲಾಗಿದ್ದಾರೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಎನ್‌ಪಿಎಸ್ ಜಾರಿಗೆ ತಂದಿವೆ.

ಇತ್ತೀಚೆಗೆ ಒಪಿಎಸ್ ಮರು ಜಾರಿಗೊಳಿಸಲು ಜಾರ್ಖಂಡ್, ರಾಜಸ್ಥಾನ, ಛತ್ತೀಸ್ಗಡ, ಹಿಮಾಚಲ ಪ್ರದೇಶ ಮೊದಲಾದ ರಾಜ್ಯಗಳು ಘೋಷಣೆ ಮಾಡಿವೆ. ಈಗ ನೌಕರರ ಬೇಡಿಕೆಗೆ ಮಣಿದ ಕೇಂದ್ರ ಸರ್ಕಾರ ಕೆಲವು ನೌಕರರಿಗೆ ಒಮ್ಮೆ ಒಪಿಎಸ್ ಗೆ ಸೇರಲು ಅವಕಾಶ ಕಲ್ಪಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read