ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ; ಪೊಲೀಸರ ಕ್ಷಮೆ ಯಾಚಿಸಿದ ಬಳಿಕ ಯುವತಿಯಿಂದ ಮತ್ತೊಂದು ವಿಡಿಯೋ ಲೋಡ್

ಕಳೆದ ವರ್ಷ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಅಸಭ್ಯ ನೃತ್ಯ ಮಾಡಿದ ಬಳಿಕ ಪೊಲೀಸರಲ್ಲಿ ಕ್ಷಮೆ ಕೇಳಿದ್ದ ಯುವತಿ ಮತ್ತೊಂದು ರೀಲ್ಸ್ ಮಾಡಿ ಸುದ್ದಿಯಾಗಿದ್ದಾಳೆ.

CSMT ಪ್ಲಾಟ್ ಫಾರ್ಮ್ ನಲ್ಲಿ ಅಸಭ್ಯ ನೃತ್ಯ ಮಾಡಿದ್ದ ಇನ್‌ಸ್ಟಾಗ್ರಾಮ್ ಪ್ರಭಾವಿ ಸೀಮಾ ಕನೋಜಿಯಾ ವಿಡಿಯೋ ವೈರಲ್ ಆಗಿತ್ತು. ಆಕೆಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಬಳಿಕ ಕ್ಷಮೆ ಯಾಚಿಸಿದ್ದಳು.

ಸಾರ್ವಜನಿಕರಿಗೆ ತೊಂದರೆಯಾಗುವಂತೆ ರೈಲ್ವೆ ಪ್ಲಾಟ್ ಫಾರ್ಮ್ ಮತ್ತು ರೈಲಿನೊಳಗೆ ಯಾರೂ ವಿಡಿಯೋ ಮಾಡಬೇಡಿ ಎಂದು ತನ್ನ ಕೃತ್ಯಕ್ಕೆ ಕ್ಷಮೆ ಕೇಳಿದ್ದಳು. ಆದರೆ ಕ್ಷಮೆ ಕೇಳಿದ ಕೆಲ ದಿನಗಳ ನಂತರ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಅಸಭ್ಯವಾಗಿ ನೃತ್ಯ ಮಾಡುತ್ತಿರುವ ಮತ್ತೊಂದು ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾಳೆ.

ಮೊದಲ ಕೃತ್ಯಕ್ಕೆ ಕ್ಷಮೆಯಾಚಿಸಿದ ಸುಮಾರು ಹತ್ತು ದಿನಗಳ ನಂತರ ಡಿಸೆಂಬರ್ 25 ರಂದು ಆಕೆ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಆದರೆ ಈ ವಿಡಿಯೋನ ಮೊದಲೇ ಚಿತ್ರೀಕರಿಸಲಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋದಲ್ಲಿ ಕೆಲ ಪುರುಷ ಪ್ರಯಾಣಿಕರ ಮುಂದೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವಾಗ, “ಇದು ನಮ್ಮ ತಂಡ ಮತ್ತು ಈ ವೀಡಿಯೊ ಕೇವಲ ಮನರಂಜನೆ ಉದ್ದೇಶಗಳಿಗಾಗಿ ಮಾತ್ರ” ಎಂದು ಬರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read