ಕುಖ್ಯಾತ ‌ʼಡ್ರಗ್‌ ಕಿಂಗ್‌ ಪಿನ್‌ʼ ಬಂಧನಕ್ಕೆ ಕಾರಣವಾಯ್ತು ಪತ್ನಿಯ ಸೋಷಿಯಲ್‌ ಮೀಡಿಯಾ ಪೋಸ್ಟ್….!

ಯುಕೆಯಲ್ಲಿ ನಡೆದ ಒಂದು ಆಚ್ಚರಿಯ ಘಟನೆಯಲ್ಲಿ, ತನ್ನ ಪತ್ನಿಯ ಸಾಮಾಜಿಕ ಮಾಧ್ಯಮದ ಪೋಸ್ಟ್‌ ಕಾರಣಕ್ಕೆ ಕುಖ್ಯಾತ ಡ್ರಗ್ ಕಿಂಗ್‌ ಪಿನ್‌ ಬಂಧನಕ್ಕೊಳಗಾಗಿದ್ದಾನೆ.

ಲೂಯಿಸ್ ಮ್ಯಾನುಯೆಲ್ ಪಿಕಾಡೋ ಗ್ರಿಜಲ್ಬಾ ಎಂಬಾತನನ್ನು ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ) ಹುಡುಕುತ್ತಿತ್ತು. ಕೋಸ್ಟಾರಿಕಾದಿಂದ ಯುನೈಟೆಡ್ ಸ್ಟೇಟ್ಸ್‌ಗೆ ಕೋಕೇನ್ ಸಾಗಿಸಿದ ಆರೋಪದ ಮೇಲೆ ಆತನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಇಷ್ಟಾದರೂ ಆತನ ಪತ್ತೆ ಸಾಧ್ಯವಾಗಿರಲಿಲ್ಲ.

ಆದರೆ, ಗ್ರಿಜಲ್ಬಾ ಮತ್ತು ಅವನ ಪತ್ನಿ ಎಸ್ಟೆಫಾನಿಯಾ ರೊಡ್ರಿಗಸ್ ತಮ್ಮ ರಜೆಯನ್ನು ಆಚರಿಸಲು ಲಂಡನ್‌ಗೆ ಬಂದಾಗ ಅವರ ಸಂತೋಷ ಕ್ಷಣಿಕವಾಗಿತ್ತು. ಅವರುಗಳು ಪ್ಯಾರಿಸ್, ರೋಮ್, ವೆನಿಸ್ ಮತ್ತು ಜಪಾನ್‌ಗೆ ಭೇಟಿ ನೀಡಿದ್ದನ್ನು ಸೇರಿದಂತೆ ತಮ್ಮ ಪ್ರವಾಸ ಕಾರ್ಯಕ್ರಮವನ್ನು ಎಸ್ಟೆಫಾನಿಯಾ ರೊಡ್ರಿಗಸ್ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದೇ ಮಾಹಿತಿ ಬಳಸಿಕೊಂಡು ಗ್ರಿಜಲ್ಬಾ ನನ್ನು ಯುಕೆಯ ರಾಷ್ಟ್ರೀಯ ಅಪರಾಧ ಸಂಸ್ಥೆ (ಎನ್‌ಸಿಎ) ಪತ್ತೆ ಹಚ್ಚಿ ಬಂಧಿಸಿದೆ. 2024 ರ ಡಿಸೆಂಬರ್ 29 ರಂದು ಗ್ರಿಜಲ್ಬಾ ನನ್ನು ಲಂಡನ್ ಬ್ರಿಡ್ಜ್ ಬಳಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read