ಹಾಸನ : ರಾಷ್ಟ್ರೀಯ ಹೆದ್ದಾರಿ-373 ಚಿಕ್ಕಮಗಳೂರು-ಬಿಳಿಕೆರೆ ರಸ್ತೆಯ ಕಿ.ಮೀ 27.780 ರಿಂದ ಕಿ.ಮೀ 57.320 ರವರೆಗೆ (ಬೇಲೂರು ತಾಲ್ಲೂಕಿನ ಮುದಿಗೆರೆಯಿಂದ ಹಾಸನ ನಗರದ ತಣ್ಣೀರುಹಳ್ಳ ವೃತ್ತದವರೆಗೆ) ಚತುಷ್ಪಥ ರಸ್ತೆ ಅಭಿವೃದ್ದಿ (ಪ್ಯಾಕೇಜ್-2). (ಜಾಬ್ ನಂ.ಎನ್.ಹೆಚ್373-ಕೆಎನ್ಟಿ-2022-23-988)” ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳ ಮಾಲೀಕರುಗಳಿಗೆ 3’ಉ’ ಅವಾರ್ಡ್ ನೋಟೀಸ್ಗಳನ್ನು ನೀಡಲಾಗಿರುತ್ತದೆ. 3’ಉ’ ಅವಾರ್ಡ್ ನೋಟೀಸ್ಗಳಲ್ಲಿ ನಮೂದಿಸಿರುವ ದಾಖಲೆಗಳನ್ನು ವಿಶೇಷ ಭೂಸ್ವಾಧೀನಾಧಿಕಾರಿ ಇವರಿಗೆ ಸಲ್ಲಿಸಿದ ತರುವಾಯ ಪರಿಹಾರ ಮೊತ್ತವನ್ನು ಸಂದಾಯ ಮಾಡಲಾಗುತ್ತದೆ.
ಈವರೆಗೂ ದಾಖಲೆಗಳನ್ನು ಸಲ್ಲಿಸದೇ ಇರುವ ಭೂಮಾಲೀಕರುಗಳು ಸೆ.23 ರ ಒಳಗಾಗಿ ಅವಶ್ಯ ದಾಖಲೆಗಳನ್ನು ಈ ಕೆಳಕಾಣಿಸಿದ ಕಚೇರಿ ವಿಳಾಸಕ್ಕೆ ಅಥವಾ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿಗಳು, ಲೋಕೋಪಯೋಗಿ ಇಲಾಖೆಯ ಆವರಣ, ಕೆ.ಆರ್.ಸರ್ಕಲ್, ಬೆಂಗಳೂರು ಇವರ ಕಚೇರಿಗೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.