ಚಿರತೆಗಳು ವ್ಯಾಯಾಮ ಮಾಡುವುದನ್ನು ಕಂಡಿದ್ದೀರಾ? ಬೆಕ್ಕುಗಳ ಜಾತಿಗೆ ಸೇರಿದ ಪ್ರಾಣಿಗಳು ಸಾಮಾನ್ಯವಾಗಿ ತಮ್ಮ ದೇಹಗಳನ್ನು ಆಗಾಗ ಸಡಿಲಿಸಲೆಂದು ಕೆಲವು ಕಸರತ್ತುಗಳನ್ನು ಮಾಡುತ್ತವೆ.
ಆದರೆ ಚಿರತೆಯೊಂದು ಸೂರ್ಯ ನಮಸ್ಕಾರವನ್ನೇ ಮಾಡುತ್ತಿರುವಂತೆ ಕಾಣುವ ವಿಡಿಯೋವೊಂದು ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್ ಮಾಡಿದ್ದಾರೆ.
“ಚಿರತೆಯಿಂದ ಸೂರ್ಯ ನಮಸ್ಕಾರ,” ಎಂದು ಸಾಕೇತ್ ಬಡೋಲಾ ಹೆಸರಿನ ನೆಟ್ಟಿಗರೊಬ್ಬರು ಮಾಡಿದ್ದ ಟ್ವೀಟ್ ಅನ್ನು ಶೇರ್ ಮಾಡಿದ್ದಾರೆ ಸುಸಂತಾ ನಂದಾ. ರಷ್ಯಾದ ಪೂರ್ವ ಭಾಗದಲ್ಲಿರುವ ಚಿರತೆಗಳ ರಾಷ್ಟ್ರೀಯ ಉದ್ಯಾನದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.
“ಫಿಟ್ನೆಸ್ ಫ್ರೀಕ್ ಚಿರತೆ,” ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ವಿನೋದಮಯ ಕಾಮೆಂಟ್ ಹಾಕಿದ್ದಾರೆ.
https://twitter.com/susantananda3/status/1640271058329645061?ref_src=twsrc%5Etfw%7Ctwcamp%5Etweetembed%7Ctwterm%5E1640271058329645061%7Ctwgr%5Efd4ed1d18e1bc6abca088fc33612438c4f7b7606%7Ctwcon%5Es1_&ref_url=https%3A%2F%2Fwww.news18.com%2Fbuzz%2Fnothing-to-see-here-just-a-leopard-performing-surya-namaskar-like-a-total-pro-7403971.html
https://twitter.com/hellopratika/status/1640324726668115968?ref_src=twsrc%5Etfw%7Ctwcamp%5Etweetembed%7Ctwterm%5E1640324726668115968%7Ctwgr%5Efd4ed1d18e1bc6abca088fc33612438c4f7b7606%7Ctwcon%5Es1_&ref_url=https%3A%2F%2Fwww.news18.com%2Fbuzz%2Fnothing-to-see-here-just-a-leopard-performing-surya-namaskar-like-a-total-pro-7403971.html
https://twitter.com/susantananda3/status/1640271058329645061?ref_src=twsrc%5Etfw%7Ctwcamp%5Etweetembed%7Ctwterm%5E1640308706935181312%7Ctwgr%5Efd4ed1d18e1bc6abca088fc33612438c4f7b7606%7Ctwcon%5Es2_&ref_url=https%3A%2F%2Fwww.news18.com%2Fbuzz%2Fnothing-to-see-here-just-a-leopard-performing-surya-namaskar-like-a-total-pro-7403971.html