ವಿದ್ಯಾರ್ಥಿಗಳೇ ಗಮನಿಸಿ : ಕರಾಮುವಿವಿಯಲ್ಲಿ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

2023-24ರ ಜನವರಿ ಆವೃತ್ತಿಯ ವಿವಿಧ ಶೈಕ್ಷಣಿಕ ಕಾರ್ಯಕ್ರಮ (ಓಡಿಎಲ್ ಮಾದರಿ-ಆಫ್ಲೈನ್) ಗಳ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಿದ್ಯಾರ್ಥಿಗಳು ಕೆಳಕಂಡ ಕೋರ್ಸ್ ಗಳಿಗೆ (https://ksouportal.com/views/StudentHome.aspx) de ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಯನುಸಾರ ದಾಖಲಾತಿಗಳೊಂದಿಗೆ ವಿವಿ ನಿಲಯದ ಕೇಂದ್ರ ಕಚೇರಿ ಮೈಸೂರು, ವಿವಿಧ ಪ್ರಾದೇಶಿಕ ಕೇಂದ್ರಗಳು ಮತ್ತು ಕಲಿಕಾರ್ಥಿ ಸಹಾಯ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ

CET ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2024
CET ಪರೀಕ್ಷೆ ದಿನಾಂಕ: 10-03-2024
ಎಲ್ಲಾ ಕೋರ್ಸ್ಗಳ ಅರ್ಜಿ ಪ್ರಕ್ರಿಯೆಗೆ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-01-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-03-2024

ಕೆಎಸ್ಒಯು ಆನ್ಲೈನ್ ಕೋರ್ಸ್
ಬಿಎ, ಬಿ.ಕಾಂ
ಎಂಎ – ಕನ್ನಡ, ಹಿಂದಿ, ಸಂಸ್ಕೃತ, ಅರ್ಥಶಾಸ್ತ್ರ, ಇಂಗ್ಲಿಷ್.
ಎಂ,ಕಾಂ, ಎಂಬಿಎ, ಎಂಎಸ್ಸಿ ಗಣಿತ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read