ಪಡಿತರ ಚೀಟಿದಾರರೇ ಗಮನಿಸಿ : ತಕ್ಷಣ ಈ ಕೆಲಸ ಮಾಡದಿದ್ರೆ ಸಿಗೋಲ್ಲ ‘ಅನ್ನಭಾಗ್ಯ’ ಯೋಜನೆಯ ಹಣ

ಪಡಿತರ ಚೀಟಿದಾರರು ತಪ್ಪದೇ ಇ-ಕೆವೈಸಿ ಮಾಡಿಸಬೇಕೆಂದು ಸರ್ಕಾರ ಅದೆಷ್ಟು ಬಾರಿ ತಿಳಿಸಿದ್ರೂ ಇನ್ನೂ ಹಲವರು ಇಕೆವೈಸಿ ಮಾಡಿಸಲು ಹೋಗಿಲ್ಲ. ತಕ್ಷಣ ನೀವು ಇಕೆವೈಸಿ ಮಾಡಿಸದೇ ಇದ್ದರೆ ಈ ತಿಂಗಳಿನಿಂದ ‘ಅನ್ನಭಾಗ್ಯ’ ಯೋಜನೆಯ ಹಣ ಬರುವುದು ಅನುಮಾನ.

ಅಕ್ಕಿಯ ಬದಲು ಪ್ರತಿ ಕೆಜಿ ಅಕ್ಕಿ 34 ರೂಪಾಯಿಗಳಂತೆ ಪ್ರತಿ ಐದು ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕು, ಕೆವೈಸಿ ಮಾಡಿಸಿಕೊಂಡಿರಬೇಕು ಎಂದು ಸರ್ಕಾರ ಈಗಾಗಲೇ ಜನರಿಗೆ ಮಾಹಿತಿ ನೀಡಿದ್ದು,  ಈ ಕೆಲಸ ಮಾಡದೆ ಇರುವ ಹಿನ್ನಲೆಯಲ್ಲಿ ಅಂಥವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

E-KYC ಮಾಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ

ಮೊದಲಿಗೆ, ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕೃತ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ಲಾಗ್ ಇನ್ ಮಾಡಬೇಕು. ಅದರ ನಂತರ, ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

– ಸೂಚನೆಗಳನ್ನು ಅನುಸರಿಸಿ ಮತ್ತು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ.
– ಆಧಾರ್, ಪ್ಯಾನ್ ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಂತರ ಅಪ್ಲೋಡ್ ಮಾಡಬೇಕು. ಈ ದಾಖಲೆಗಳನ್ನು ಎರಡೂ ಬದಿಗಳಲ್ಲಿ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ.
– ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ನವೀಕರಣ ಮಾಹಿತಿಯನ್ನು ನಂತರ ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮೂಲಕ ತಿಳಿಸಲಾಗುತ್ತದೆ.

ರೇಷನ್ ಕಾರ್ಡ್ ಪಡಿತರ ಪಡೆಯಲು ಮಾತ್ರವಲ್ಲದೇ ಗುರುತಿನ ಚೀಟಿ ಪಡೆಯಲು ಕೂಡ ಸಹಕಾರಿಯಾಗುತ್ತದೆ. ಈಗಾಗಲೇ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.ಸರ್ಕಾರ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ತಕ್ಷಣಕ್ಕೆ ಮಾಡಿಲ್ಲ ಅಂದರೆ ಡಿ.30 ರೊಳಗೆ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read